92ರ ಇಳಿ ವಯಸ್ಸಿನಲ್ಲಿ ಮಾಧ್ಯಮ ದೊರೆ ಮುರ್ಡೋಕ್ ಗೆ 5ನೇ ಮದುವೆ

ಮಂಗಳೂರು(ವಾಷಿಂಗ್ಟನ್‌): ಮಾಧ್ಯಮ ದೊರೆ ರೂಪರ್ಟ್‌ ಮುರ್ಡೋಕ್ ತಮ್ಮ 92ನೇ ವಯಸ್ಸಿನಲ್ಲಿ 5ನೇ ಮದುವೆಗೆ ಮುಂದಾಗಿದ್ದು, ತಮ್ಮ ಗೆಳತಿ ಎಲೆನಾ ಜುಕೋವಾ (67) ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕ್ಯಾಲಿಫೋರ್ನಿ­ಯಾದ ಮೊರಗಾದಲ್ಲಿರುವ ಮುರ್ಡೋಕ್ ಅವರ ಎಸ್ಟೇಟ್‌ನಲ್ಲಿ ಇವರಿಬ್ಬರ ಮದುವೆ ಜೂನ್‌ ತಿಂಗಳಿನಲ್ಲಿ ನಡೆಯಲಿದೆ.

ಎಲೆನಾ ಜುಕೋವಾ ಅವರು ನಿವೃತ್ತ ಜೀವ ಶಾಸ್ತ್ರಜ್ಞೆ­ಯಾಗಿದ್ದು, ಕಳೆದ ವರ್ಷ ಬೇಸಗೆಯಲ್ಲಿ ಇಬ್ಬರ ನಡುವೆ ಉಂಟಾದ ಪರಿಚಯ ಪ್ರೇಮಕ್ಕೆ ತಿರುಗಿದ್ದು ಮದುವೆಯ ಹಂತಕ್ಕೆ ತಲುಪಿದೆ. 2022ರಲ್ಲಿ ತಮ್ಮ 4ನೇ ಪತ್ನಿಯಾಗಿದ್ದ ರೂಪದರ್ಶಿ ಜೆರ್ರಿ ಹಾಲ್‌ಗೆ ಮುರ್ಡೋಕ್ ವಿಚ್ಛೇದನ ನೀಡಿದ್ದರು. ಇವರಲ್ಲದೇ ಪೆಟ್ರೀಷಿಯಾ ಬುಕರ್‌, ಅನ್ನಾ ಮನ್‌, ವೆಂಡಿ ಡೆಂಗ್‌ ಅವರ ಮಾಜಿ ಪತ್ನಿಯರು. ಅಮೆರಿಕದ ಖ್ಯಾತ ಮಾಧ್ಯಮ ಸಂಸ್ಥೆಗಳಾದ ವಾಲ್‌ಸ್ಟ್ರೀಟ್‌, ನ್ಯೂಯಾರ್ಕ್‌ ಪೋಸ್ಟ್‌, ಫಾಕ್ಸ್‌ ನ್ಯೂಸ್‌, ಭಾರತದ ಸ್ಟಾರ್‌ ಇಂಡಿಯಾ ಸೇರಿದಂತೆ ಬಹುತೇಕ ರಾಷ್ಟ್ರೀಯ- ಅಂತಾ­ರಾಷ್ಟ್ರೀಯ ಮಾಧ್ಯಮಗಳು ಮುರ್ಡೋಕ್ ಅವರ ಒಡೆತನದಲ್ಲಿದೆ.

LEAVE A REPLY

Please enter your comment!
Please enter your name here