ಬುದ್ಧಿವಂತರ ಜಿಲ್ಲೆಯಲ್ಲೊಂದು ಘಟನೆ-ಮಾವನಿಗೆ ಥಳಿಸಿದ ಸೊಸೆ-ವಿಡಿಯೋ ವೈರಲ್‌, ಕೇಸು ದಾಖಲು

ಮಂಗಳೂರು: ವೃದ್ದ ಮಾವನಿಗೆ ಸೊಸೆ ಮನಸೋ ಇಚ್ಛೆ ಥಳಿಸಿದ ಘಟನೆ ಮಂಗಳೂರಿನ ಕುಲಶೇಖರದಲ್ಲಿ ನಡೆದಿದ್ದು, ಸೊಸೆಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 76 ವರ್ಷದ ಪದ್ಮನಾಭ ಸುವರ್ಣ ಹಲ್ಲೆಗೊಳಗಾಗಿದ್ದು, ಸೊಸೆ ಉಮಾಶಂಕರಿ ವಿರುದ್ಧ ಪ್ರಕರಣ ದಾಖಲಾಗಿದೆ.

ಮಂಗಳೂರಿನ ಅತ್ತಾವರದ ಕೆಇಬಿಯಲ್ಲಿ ಅಧಿಕಾರಿಯಾಗಿರುವ ಸೊಸೆ ಉಮಾಶಂಕರಿ ಮಾ.9ರಂದು ವಾಕ್ ಸ್ಟಿಕ್ ನಲ್ಲಿ ಮಾವನಿಗೆ ಹಲ್ಲೆ ಮಾಡಿದ್ದು, ವಿದೇಶದಲ್ಲಿ ಉದ್ಯೋಗದಲ್ಲಿರುವ ಪತಿ ಪ್ರೀತಂ ಸುವರ್ಣ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಗಾಯಾಳು ಪದ್ಮನಾಭ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.ತಂದೆಗೆ ಥಳಿಸಿದ ಉಮಾಶಂಕರಿ‌ ವಿರುದ್ಧ ಪದ್ಮನಾಭ ಸುವರ್ಣರ ಮಗಳು ಪ್ರಿಯಾ ಸುವರ್ಣ ದೂರು ನೀಡಿದ್ದಾರೆ. ಸಿಸಿಟಿವಿ ವಿಡಿಯೋ ಆಧಾರವಾಗಿರಿಸಿ ಕಂಕನಾಡಿ ಪೊಲೀಸ್ ಠಾಣೆಯಲ್ಲಿ Cr. No 53/24 u/s 324,307 ಅನ್ವಯ ಕೊಲೆಯತ್ನ ದೂರು ದಾಖಲು ಮಾಡಲಾಗಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here