ಈ ತಳಿಯ ಶ್ವಾನ ನಿಮ್ಮಲ್ಲಿದೆಯೇ? – 23 ‘ಅಪಾಯಕಾರಿ’ ಶ್ವಾನ ತಳಿ ನಿಷೇಧಕ್ಕೆ ಕೇಂದ್ರ ಪ್ರಸ್ತಾಪ

ಮಂಗಳೂರು/ಬೆಂಗಳೂರು: ದೇಶಾದ್ಯಂತ ನಾಯಿ ಕಡಿತದ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ ಕೇಂದ್ರ ಸರ್ಕಾರ ಸುಮಾರು 23 ಕ್ರೂರ ಅಪಾಯಕಾರಿ ತಳಿಯ ಶ್ವಾನಗಳ ಆಮದು, ಮಾರಾಟ ಮತ್ತು ಸಂತಾನೋತ್ಪತ್ತಿಯನ್ನು ನಿಷೇಧಿಸಲು ಪ್ರಸ್ತಾವ ಸಲ್ಲಿಸಿದೆ.

ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಡಾ.ಒ.ಪಿ.ಚೌಧರಿ ಅವರು ನಿಷೇಧ ಹೇರುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು ಕಳುಹಿಸಿದ್ದಾರೆ.

ಪಿಟ್‌ಬುಲ್ ಟೆರಿಯರ್, ಟೋಸಾ ಇನು, ಅಮೇರಿಕನ್ ಸ್ಟಾಫರ್ಡ್‌ಶೈರ್ ಟೆರಿಯರ್, ಫಿಲಾ ಬ್ರೆಸಿಲಿರೊ, ಡೊಗೊ ಅರ್ಜೆಂಟಿನೋ, ಅಮೇರಿಕನ್ ಬುಲ್‌ಡಾಗ್, ಬೋರ್‌ಬೋಲ್, ಕಂಗಲ್, ರಷ್ಯನ್ ಶೆಫರ್ಡ್, ಟೊರ್ನ್‌ಜಾಕ್, ಸರ್ಪ್ಲಾನಿನಾಕ್, ಜಪಾನೀಸ್ ಟೋಸಾ ಮತ್ತು ಅಕಿಟಾ, ಮಾಸ್ಟಿಫ್ಸ್, ರಾಟ್‌ವೀಲರ್, ಟೆರಿಯರ್‌ಗಳು ರಿಡ್ಜ್ಬ್ಯಾಕ್, ವುಲ್ಫ್ ಡಾಗ್ಸ್, ಕೆನರಿಯೊ, ಅಕ್ಬಾಶ್ ನಾಯಿ, ಮಾಸ್ಕೋ ಗಾರ್ಡ್ ಡಾಗ್, ಕೇನ್ ಕೊರ್ಸೊ ಶ್ವಾನಗಳನ್ನು ನಿಷೇಧಿಸಲು ಪಟ್ಟಿ ಮಾಡಲಾಗಿದೆ. ಪಶುಸಂಗೋಪನಾ ಆಯುಕ್ತರ ಅಧ್ಯಕ್ಷತೆಯಲ್ಲಿ ರಚಿಸಲಾದ ತಜ್ಞರ ಸಮಿತಿಯು ಇಂತಹ ನಾಯಿ ತಳಿಗಳ ಆಮದನ್ನು ನಿಷೇಧಿಸಲು ಶಿಫಾರಸು ಮಾಡಿದೆ. ನಾಯಿ ಸಂತಾನೋತ್ಪತ್ತಿ ಮತ್ತು ಮಾರುಕಟ್ಟೆ ನಿಯಮಗಳು 2017 ಮತ್ತು ಪೆಟ್‌ ಶಾಪ್‌ ರೂಲ್ಸ್‌ 2018ನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಕರೆ ನೀಡಿದೆ.

LEAVE A REPLY

Please enter your comment!
Please enter your name here