ದ.ಕ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಪಟ್ಟಿ ಬಿಡುಗಡೆ – ಅಧ್ಯಕ್ಷರಾಗಿ ಭರತ್‌ ಮುಂಡೋಡಿ – ಉಪಾಧ್ಯಕ್ಷರಾಗಿ ಪುತ್ತೂರಿನ ಜೋಕಿಂ ಡಿʼಸೋಜ ಸೇರಿದಂತೆ ಐವರ ನೇಮಕ

ಮಂಗಳೂರು/ಬೆಂಗಳೂರು: ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ ಮತ್ತು ಯುವನಿಧಿ ಯೋಜನೆಗಳು ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಗೊಂಡಿದೆ. ಈ ಗ್ಯಾರಂಟಿ ಯೋಜನೆಯ ಲಾಭಗಳನ್ನು ಅರ್ಹ ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅನುಕೂಲವಾಗುವಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆಗಾಗಿ ಸಾಂಸ್ಥಿಕ ಕಾರ್ಯವಿಧಾನಗಳನ್ನು ಜಾರಿಗೆ ತರಲು ದ.ಕ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರಕ್ಕೆ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು/ಸದಸ್ಯ ಕಾರ್ಯದರ್ಶಿಗಳ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.

ದ.ಕ ಜಿಲ್ಲಾ ಸರಕಾರದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ಭರತ್‌ ಮುಂಡೋಡಿ ಅವರನ್ನು ನೇಮಿಸಲಾಗಿದೆ. ಉಪಾದ್ಯಕ್ಷರಾಗಿ ಪುತ್ತೂರಿನ ಜೋಕಿಂ ಡಿಸೋಜ, ಉಳ್ಳಾಲ‌ ತಲಪಾಡಿಯ ಸುರೇಖಾ ಚಂದ್ರಹಾಸ್, ಮಲ್ಲೂರಿನ ಎಂ.ಕೆ ಯೂಸುಫ್, ಬೆಳ್ತಂಗಡಿ ಕುಕ್ಕೆಡಿಯ ಶೇಖರ್‌ ಕುಕ್ಕೆಡಿ, ಬಂಟ್ವಾಳ ಜೋಡುಮಾರ್ಗದ ನಾರಾಯಣ ನಾಯ್ಕ್‌ ಅವರನ್ನು ನೇಮಿಸಲಾಗಿದೆ. ಉಳಿದಂತೆ 9ತಾಲೂಕಿನ ಅನುಷ್ಠಾನ ಸಮಿತಿ ಅಧ್ಯಕ್ಷರು ಸೇರಿದಂತೆ 16 ಸದಸ್ಯರನ್ನು ಸಮಿತಿಗೆ ಆಯ್ಕೆ ಮಾಡಲಾಗಿದೆ. ದ.ಕ ಜಿಲ್ಲಾ ಅಪರ ಜಿಲ್ಲಾಧಿಕಾರಿಗಳು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.

ಸರಕಾರ ಬಿಡುಗಡೆ ಮಾಡಿದ ಪಟ್ಟಿ ಇಂತಿದೆ:

LEAVE A REPLY

Please enter your comment!
Please enter your name here