ಮಂಗಳೂರು/ಇಂಡೋನೇಷ್ಯಾ: ವೇಗವಾಗಿ ಸ್ಕೂಟರ್ ಓಡಿಸಿಕೊಂಡ ಬಂದ ಇಬ್ಬರು ಯುವತಿಯರು ಗಾಡಿ ಬ್ಯಾಲೆನ್ಸ್ ತಪ್ಪಿ ಸೀದಾ ಮನೆಯೊಂದರ ಛಾವಣಿ ಮೇಲೆ ಬಿದ್ದ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.
ರಸ್ತೆ ಮೇಲೆ ವೇಗವಾಗಿ ಹೋಗ್ತಿದ್ದ ವೇಳೆ ಸ್ಕೂಟರ್ನ ಬ್ರೇಕ್ ಫೇಲ್ಯೂರ್ ಆಗಿದೆ. ಪರಿಣಾಮ ನಿಯಂತ್ರಣ ತಪ್ಪಿದ ಬೈಕ್ ಸೀದಾ ಹೋಗಿ ಮನೆಯ ಛಾವಣಿಗೆ ಹಾರಿದೆ. ಪರಿಣಾಮ ಇಬ್ಬರು ಯುವತಿಯರು ಸ್ಕೂಟಿ ಸಮೇತ ಮನೆ ಮೇಲೆ ಲಾಕ್ ಆಗಿದ್ದಾರೆ. ಮನೆಗೆ ಹಾಕಲಾಗಿದ್ದ ಹೆಂಚುಗಳು ಪುಡಿಪುಡಿಯಾಗಿದೆ. ಮನೆಗೂ ಹಾನಿಯಾಗಿದೆ. ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದ್ದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ: