ಮಂಗಳೂರು(ಬೆಂಗಳೂರು): ಶತಮಾನೋತ್ಸವದ ಸಂಭ್ರಮದಲ್ಲಿರುವ ಎಂಟಿಆರ್ ಸಂಸ್ಥೆಯು ಮಾ.16ರಂದು ಬೊಮ್ಮಸಂದ್ರ ಫ್ಯಾಕ್ಟರಿಯಲ್ಲಿ ಲೋರ್ಮನ್ ಕಿಚನ್ ಸಲಕರಣೆ ಸಹಭಾಗಿತ್ವದಲ್ಲಿ ಎಂಟಿಆರ್ ಸಿಗ್ನೇಚರ್ ರೆಡ್ ಬ್ಯಾಟರ್ ಬಳಸಿಕೊಂಡು 75 ಬಾಣಸಿಗರಿಂದ 123 ಅಡಿ ಉದ್ದದ ದೋಸೆ ತಯಾರಿಸುವ ಮೂಲಕ ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.
ಎಂಟಿಆರ್ ಸಿಇಒ ಸುನಯ್ ಭಾಸಿನ್ ಮಾತನಾಡಿ, ನೂರರ ಸಂಭ್ರಮಾಚರಣೆ ಸಂದರ್ಭದಲ್ಲಿ ವಿಶ್ವದ ಅತಿ ಉದ್ದದ ದೋಸೆ ತಯಾರಿಸುವ ಮೂಲಕ ಸಂಸ್ಥೆಯು ವಿಶ್ವ ದಾಖಲೆ ಪುಟ ಸೇರಿರುವುದು ಹೆಮ್ಮೆಯ ಸಂಗತಿ. ಈ ಅಪರೂಪದ ದೋಸೆ ನಮ್ಮ ಪರಂಪರೆ ಬಿಂಬಿಸುತ್ತದೆ. ಇದು ನಾವು ತಲೆಮಾರುಗಳಿಂದ ಸ್ವೀಕರಿಸುತ್ತಿರುವ ಪ್ರೀತಿಯ ಸಂಕೇತವಾಗಿದೆ. ದೋಸೆಯು ಎಂಟಿಆರ್‌ನ ಪರಂಪರೆಯ ಭಾಗವಾಗಿದೆ. ದಕ್ಷಿಣ ಭಾರತೀಯ ಖಾದ್ಯವಾಗಿದ್ದರೂ, ಈಗ ವಿಶ್ವದೆಲ್ಲೆಡೆ ಗುರುತಿಸಲ್ಪಟ್ಟಿದೆ ಎಂದು ಹೇಳಿದರು.