ಲೋಕಸಭಾ ಚುನಾವಣೆ-ಪತ್ರಿಕಾಗೋಷ್ಠಿಯಲ್ಲಿ ದ.ಕ ಜಿಲ್ಲಾ ಮತದಾರರ ಮಾಹಿತಿ ನೀಡಿದ ಜಿಲ್ಲಾಧಿಕಾರಿ

ಮಂಗಳೂರು: ಲೋಕಸಭಾ ಚುನಾವಣೆ ಘೋಷಣೆ ಹಿನ್ನೆಲೆ ಪತ್ರಿಕಾಗೋಷ್ಠಿ ನಡೆಸಿದ ದ.ಕ ಜಿಲ್ಲಾಧಿಕಾರಿ, ಜಿಲ್ಲೆಯ ಮತದಾರರ ಮಾಹಿತಿ ಮತ್ತು ನೀತಿ ಸಂಹಿತೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಮಾರ್ಚ್ 15 ರವರೆಗೆ ಒಟ್ಟು 1,79,6303 ಮತದಾರರಿದ್ದು, ಈ ಪೈಕಿ 876957 ಪುರುಷರು, 919279 ಮಹಿಳಾ ಮತದಾರರು ಮತ್ತು 67 ತೃತೀಯ ಲಿಂಗಿಗಳಾಗಿದ್ದಾರೆ. ಮಂಗಳೂರು ದಕ್ಷಿಣದಲ್ಲಿ 248956 ಮತದಾರರಿದ್ದು, ಜಿಲ್ಲೆಯಲ್ಲಿ ಒಟ್ಟು 35689 ಯುವ ಮತದಾದರಿದ್ದಾರೆ. ಈ ಪೈಕಿ 18310 ಮಹಿಳಾ ಮತದಾರರು, 17376 ಪುರುಷರು, 3 ತೃತೀಯ ಲಿಂಗಿಯರು. 21887 ಮಂದಿ 70 ವರ್ಷ ಮೇಲ್ಪಟ್ಟ ಮತದರರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1876 ಮತ ಕೇಂದ್ರಗಳಿವೆ. ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಕ್ಕೆ 17 ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು, 8 ಸಹಾಯಕ ಚುನಾವಣಾಧಿಕಾರಿ ನೇಮಕ. ಜಿಲ್ಲೆಯಲ್ಲಿ ಮಾರ್ಚ್ 16 ರಿಂದ ಜೂನ್ 6 ವರೆಗೆ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಜಿಲ್ಲೆಯಲ್ಲಿ ಒಟ್ಟು 25 ವಿಡಿಯೋ ಕಣ್ಗಾವಲು ತಂಡ, 72 ಕ್ಷಿಪ್ರ ಪಡೆ, 69 ಸ್ಥಿರ ಕಣ್ಗಾವಲು ತಂಡ, 186 ಅಧಿಕಾರಿಗಳ ವಲಯದ ತಂಡ, 8 ಅಕೌಂಟಿಂಗ್ ತಂಡ, 8 ಸಹಾಯಕ ಖರ್ಚು ನಿಗಾವಣೆ ತಂಡ. ಜಿಲ್ಲೆಯಲ್ಲಿ ಒಟ್ಟು 11 ಚೆಕ್ ಪೋಸ್ಟ್ ರಚನೆ ಮಾಡಲಾಗಿದ್ದು, ಚಾರ್ಮಾಡಿ, ನಾರಾವಿಯಲ್ಲಿ ಎರಡು, ಮೂಡಬಿದಿರೆ, ಬೆಳುವಾಯಿ, ಬಪ್ಪನಾಡು, ಮರೂರು ನಲ್ಲಿ ಮೂರು, ಮಂಗಳೂರು ಉತ್ತರ, ತೋಡಾರ್ ಎಡಪದವು, ಬೆಂಗರೆ ಕೂಳೂರು ಸೇತುವೆ, ಮುಕ್ಕದಲ್ಲಿ. ಮಂಗಳೂರು ದಕ್ಷಿಣ, ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯದಲ್ಲಿ ತಲಾ ಮೂರು ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here