ಜೋಕಟ್ಟೆ ಪಂಚಾಯತ್ ವ್ಯಾಪ್ತಿಯ ಪ್ರೇಮ್ ನಗರದಲ್ಲಿ ದಫನ ಭೂಮಿ ಕಾಮಗಾರಿ-ಸ್ಥಳೀಯರಿಂದ ವಿರೋಧ

ಮಂಗಳೂರು: ಮಂಗಳೂರು ಹೊರವಲಯದ ಸುರತ್ಕಲ್ ತೋಕೂರು, ಜೋಕಟ್ಟೆ ಪಂಚಾಯತ್ ವ್ಯಾಪ್ತಿಯ ಪ್ರೇಮ್ ನಗರ ಎಂಬಲ್ಲಿ ದಫನ ಭೂಮಿ ನಿರ್ಮಿಸಲಾಗುತ್ತಿದ್ದು ಇದನ್ನು ವಿರೋಧಿಸಿ ಸ್ಥಳೀಯ ನಿವಾಸಿಗಳು ಮತ್ತು ಸಾರ್ವಜನಿಕರು ಪ್ರತಿಭಟನೆ ನಡೆಸಿದ ಘಟನೆ ಮಾ.18ರಂದು ನಡೆಯಿತು.

ಸುಮಾರು 300ಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ದಫನ ಭೂಮಿಗಾಗಿ ನಡೆಯುತಿದ್ದ ಕೆಲಸಕಾರ್ಯಗಳನ್ನ ತಕ್ಷಣವೇ ನಿಲ್ಲಿಸುವಂತೆ ಆಗ್ರಹಿಸಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾ ನಿರತರಿಂದ ಮಾಹಿತಿ ಪಡೆದು ದಫನ ಭೂಮಿ ವಿವಾದ ನ್ಯಾಯಾಲಯದಲ್ಲಿರುವುದರಿಂದ ನಡೆಯುತ್ತಿರುವ ಕೆಲಸಕಾರ್ಯಗಳನ್ನು ನಿಲ್ಲಿಸುವಂತೆ ಹಿರಿಯ ಪೊಲೀಸ್ ಅಧಿಕಾರಿ ಸೂಚಿಸಿದ ಹಿನ್ನೆಲೆಯಲ್ಲಿ ಕಾಮಗಾರಿಗಳನ್ನು ನಿಲ್ಲಿಸಲಾಯಿತು. ಪ್ರತಿಭಟನಾ ನಿರತರು ಮತ್ತು ಪೊಲೀಸರು ಸ್ಥಳದಿಂದ ಹೋದ ಬಳಿಕ, ಕಾನೂನನ್ನು ಗಾಳಿಗೆ ತೂರಿ ಮತ್ತೆ ಕೆಲಸ ಪ್ರಾರಂಭಿಸಲಾಗಿದೆ ಎಂದು ತಿಳಿದುಬಂದಿದ್ದು ಪ್ರೇಮ್ ನಗರದ ನಿವಾಸಿಗಳು ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here