ಕಾಂಗ್ರೆಸ್ 2ನೇ ಪಟ್ಟಿ ಪ್ರಕಟ-ರಾಜ್ಯದ 17 ಕ್ಷೇತ್ರಗಳಿಗೆ ಟಿಕೆಟ್ ಅಂತಿಮ

ಮಂಗಳೂರು(ನವದೆಹಲಿ): ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಮೊದಲ ಪಟ್ಟಿಯಲ್ಲಿ 7 ಕ್ಷೇತ್ರಗಳ ಅಭ್ಯರ್ಥಿಗಳನ್ನಷ್ಟೇ ಅಂತಿಮಗೊಳಿಸಿದ್ದ ಕಾಂಗ್ರೆಸ್, 2ನೇ ಪಟ್ಟಿಯಲ್ಲಿ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಮಾ.21ರಂದು ಘೋಷಿಸಿದೆ.

ಪಟ್ಟಿಯ ವಿವರ ಇಂತಿದೆ.

ಚಿಕ್ಕೋಡಿ– ಪ್ರಿಯಾಂಕ ಜಾರಕಿಹೊಳಿ

ಬೆಳಗಾವಿ– ಮೃಣಾಲ್ ರವೀಂದ್ರ ಹೆಬ್ಬಾಳ್ಕರ್‌

ಬಾಗಲಕೋಟೆ– ಸಂಯುಕ್ತ ಎಸ್. ಪಾಟೀಲ

ಗುಲಬರ್ಗ (ಪರಿಶಿಷ್ಟ ಜಾತಿ)– ಎಸ್‌.ಸಿ.ರಾಧಾಕೃಷ್ಣ

ರಾಯಚೂರು (ಪರಿಶಿಷ್ಟ ಪಂಗಡ)– ಜಿ. ಕುಮಾರ ನಾಯಕ್

ಬೀದರ್‌– ಸಾಗರ್ ಖಂಡ್ರೆ

ಕೊಪ್ಪಳ– ಕೆ. ರಾಜಶೇಖರ ಬಸವರಾಜ ಹಿಟ್ನಾಳ

ಧಾರವಾಡ– ವಿನೋದ ಅಸೂಟಿ

ಉತ್ತರ ಕನ್ನಡ– ಡಾ. ಅಂಜಲಿ ನಿಂಬಾಳ್ಕರ್

ದಾವಣಗೆರೆ– ಪ್ರಭಾ ಮಲ್ಲಿಕಾರ್ಜುನ

ಉಡುಪಿ ಚಿಕ್ಕಮಗಳೂರು– ಡಾ. ಜಯಪ್ರಕಾಶ್ ಹೆಗ್ಡೆ

ದಕ್ಷಿಣ ಕನ್ನಡ– ಪದ್ಮರಾಜ್

ಚಿತ್ರದುರ್ಗ (ಪರಿಶಿಷ್ಟ ಜಾತಿ)– ಬಿ.ಎನ್.ಚಂದ್ರಪ್ಪ

ಮೈಸೂರು– ಎಂ. ಲಕ್ಷ್ಮಣ್

ಬೆಂಗಳೂರು ಉತ್ತರ– ಪ್ರೊ. ಎಂ.ವಿ.ರಾಜೀವ್ ಗೌಡ

ಬೆಂಗಳೂರು ಕೇಂದ್ರ– ಮನ್ಸೂರ್ ಅಲಿ ಖಾನ್

ಬೆಂಗಳೂರು ದಕ್ಷಿಣ– ಸೌಮ್ಯಾ ರೆಡ್ಡಿ

ಬಳ್ಳಾರಿ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ಬಾಕಿ ಇದೆ. ಉಳಿದಂತೆ ಅರುಣಾಚಲ ಪ್ರದೇಶ–2, ಗುಜರಾತ್‌– 11, ಮಹಾರಾಷ್ಟ್ರ– 7, ರಾಜಸ್ಥಾನ– 6, ತೆಲಂಗಾಣ– 5, ಪಶ್ಚಿಮ ಬಂಗಳಾ– 8, ಪುದುಚೇರಿ–1 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಕಾಂಗ್ರೆಸ್ ಪಟ್ಟಿ ಬಿಡುಗಡೆ ಮಾಡಿದೆ.‌

ರಾಜಾ ವೇಣುಗೋಪಾಲ ನಾಯಕ
ಆಯನೂರು ಮಂಜುನಾಥ್

ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ನಿಧನದಿಂದ ತೆರವಾಗಿದ್ದ ಸುರಪುರ (ಪರಿಶಿಷ್ಟ ಪಂಗಡ) ವಿಧಾನಸಭಾ ಕ್ಷೇತ್ರಕ್ಕೆ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ ಅವರನ್ನು ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಕಣಕ್ಕಿಳಿಸಿದೆ. ಕರ್ನಾಟಕ ವಿಧಾನ ಪರಿಷತ್ತಿನ ನೈಋತ್ಯ ಪದವೀಧರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ತೀರ್ಮಾನಿಸಿದೆ.

 

LEAVE A REPLY

Please enter your comment!
Please enter your name here