ಮಂಗಳೂರು: ಗೋವುಗಳ ರಕ್ಷಣೆ ಮಾಡುತ್ತಿದ್ದ ಜಿಲ್ಲೆಯ ಹಿಂದೂ ಕಾರ್ಯಕರ್ತರ ಮೇಲೆ ಗೂಂಡಾಕಾಯ್ದೆ ಕೇಸು ದಾಖಲಿಸಲಾಗುತ್ತಿದ್ದು, ರಾಜ್ಯ ಸರಕಾರದ ವಿರುದ್ದ ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದನ ತಾಯಿ ಸಮಾನ.. ಅಂಹತ ತಾಯಯನ್ನ ರಕ್ಷಿಸಬಾರದಾದರೆ ನಾವು ಮನುಷ್ಯರಾಗಿ ಹುಟ್ಟಿ ಏನು ಪ್ರಯೋಜನ.? ಸರಕಾರಕ್ಕೆ ನಾಚಿಗೆಯಾಗಬೇಕು, ಪಾಕಿಸ್ತಾನ್ ಜಿಂದಾಬಾದ್ ಹೇಳುವವರಿಗೆ ಗೂಂಡಾಕಾಯ್ದೆ ಹಾಕುವ ಧೈರ್ಯ ನಿಮಗಿಲ್ಲ, ನೀವು ಗೂಂಡಾಕಾಯ್ದೆ ಹಾಕಿದ್ರೆ ನಾವು ಹೆದರಲ್ಲ ಎಂದು ಸರಕಾರದ ವಿರುದ್ಧ ಗುಡುಗಿದ್ದಾರೆ. ನೀವು ಕೇಸು ಹಾಕುವುದಕ್ಕಿಂತ ಹೆಚ್ಚು ನಾವು ಗಟ್ಟಿಯಾಗಿ ನಿಂತು ಎದುರಿಸುವ ಎದೆಗಾರಿಕೆ ಬರುತ್ತದೆ. ಇನ್ನಷ್ಟು ಹೋರಾಟವನ್ನ ಮಾಡುತ್ತೇವೆ.. ಸರ್ಕಾರಕ್ಕೆ ಹಾಗೂ ಪೊಲೀಸ್ ಇಲಾಖೆಗೆ ಎಚ್ಚರಿಕೆ
ಗೂಂಡಾ ಕಾಯ್ದೆ ಹಾಕುವುದನ್ನು ಇಲ್ಲಿಗೆ ನಿಲ್ಲಿಸುವ ಕೆಲಸ ಮಾಡಿ ಇಲ್ಲವಾದರೇ ಬಿಜೆಪಿ ಇದಕ್ಕೆ ಯಾವ ರೀತಿ ಹೋರಾಟ ಮಾಡಬೇಕು, ಎದುರಿಸಬೇಕು ಎದುರಿಸಿಯೇ ಸಿದ್ದ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.