ಸೆಲೂನ್ ಮಾಲಕನಿಗೆ ಚೂರಿ ಇರಿತ ಪ್ರಕರಣ-ಆರೋಪಿಯ ಬಂಧನ

ಮಂಗಳೂರು: ಸೆಲೂನ್ ಮಾಲಕನಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದ ಆರೋಪಿ ಬಂಟ್ವಾಳ ತಾಲೂಕಿನ ಬರೀಮಾರಿನ ಆನಂದ ಸಪಲ್ಯ (49) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ರಾಜಕೀಯ ವಿಚಾರವಾಗಿ ನಡೆದ ಚರ್ಚೆ ವಿಕೋಪಕ್ಕೆ ತಿರುಗಿ ಬೋಳಾರದ ಕಾಂತಿ ಹೇರ್ ಡ್ರೆಸ್ಸಸ್ ನ ಮಾಲಕ ಎಡ್ವಿನ್ ವಿನಯ್ ಕುಮಾರ್ (65) ಎಂಬವರನ್ನು ಆರೋಪಿ ಆನಂದ ಸಪಲ್ಯ ಚೂರಿಯಿಂದ ಇರಿದಿದ್ದ. ಈ ಘಟನೆ ನಗರದ ಬೋಳಾರದ ಸರಕಾರಿ ಶಾಲೆಯ ಬಳಿ ಶನಿವಾರ(ಎ.13) ಸಂಜೆ ನಡೆದಿತ್ತು. ಮದ್ಯ ಸೇವಿಸಿದ ಅಮಲಿನಲ್ಲಿದ್ದ ಆರೋಪಿ ಆನಂದ ಸಫಲ್ಯ ಸಮೀಪದಲ್ಲೇ ಇರುವ ತನ್ನ ಮನೆಯಿಂದ ಚೂರಿ ತಂದು ಎಡ್ವಿನ್‌ ಅವರ ಎದೆಗೆ ಇರಿದಿದ್ದ. ಆ ಬಳಿಕ ಪರಾರಿಯಾಗಿದ್ದ ಆರೋಪಿಯ ಪತ್ತೆಗೆ ಬಲೆಬೀಸಿದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here