ಮಂಗಳೂರು: ಪ್ರಧಾನಿ ಮೋದಿ ರೋಡ್ ಶೋ ಮುಗಿದ ಬಳಿಕ ಯುವಕರ ತಂಡದ ಮಧ್ಯೆ ಹೊಯ್ ಕೈ ನಡೆದ ಘಟನೆ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಳಿ ಎ.14ರ ರಾತ್ರಿ ನಡೆದಿದೆ.
ಪ್ರಧಾನಿ ಮೋದಿ ರೋಡ್ ಶೋ ವೀಕ್ಷಿಸಲು ಬಂದಿದ್ದ ಮಹಿಳೆಯೊಬ್ಬರಿಗೆ ಅಲ್ಲಿಗೆ ಬಂದ ಯುವಕನೋರ್ವ ಮೊಬೈಲ್ ನಂಬರ್ ನೀಡಿರುವುದೇ ಇದಕ್ಕೆ ಕಾರಣ. ಚೀಟಿಯಲ್ಲಿ ತನ್ನ ಮೊಬೈಲ್ ನಂಬರ್ ಬರೆದು ಮಹಿಳೆಗೆ ಯುವಕ ನೀಡಿದ್ದ ವಿಷಯ ತಿಳಿದು ಯುವಕನಿಗೆ ಮಹಿಳೆಯ ಪತಿ ಧರ್ಮದೇಟು ನೀಡಿದ್ದಾರೆ. ಇಷ್ಟು ಮಾತ್ರವಲ್ಲ ಸ್ಥಳದಲ್ಲಿದ್ದ ಯುವಕರ ತಂಡದಿಂದಲೂ ಸಾಕಾಗುವಷ್ಟು ಗೂಸ ಕೊಡುಗೆಯಾಗಿ ಸಿಕ್ಕಿದೆ. ಮಹಿಳೆಯ ಗಂಡ ಮೊಬೈಲ್ ಕಿತ್ತುಕೊಂಡು ಯುವಕನನ್ನು ತೀವ್ರ ತರಾಟೆಗೆತ್ತಿಕೊಂಡಿದ್ದಾರೆ. ಕೊನೆಗೆ ಸ್ಥಳದಲ್ಲಿದ್ದ ಇತರ ಸಾರ್ವಜನಿಕರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿದೆ. ಘಟನೆ ನಡೆದುಹೋಗಿದೆ. ಆದರೆ ಘಟನೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿʼ