



ಮಂಗಳೂರು: ಜಗತ್ತಿನ ಅತ್ಯಂತ ನೂರು ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಇದರಲ್ಲಿ ಭಾರತದ ಎಂಟು ಜನರ ಹೆಸರು ಕೂಡ ಇದೆ. ಟೈಮ್ ಮ್ಯಾಗಜೀನ್‌ನ 2024, 100 ಜಾಗತಿಕ ಪ್ರಭಾವಿ ವ್ಯಕ್ತಿಗಳಲ್ಲಿ ಭಾರತದ ಎಂಟು ಜನರನ್ನು ಗುರುತಿಸಿದೆ. ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ನಟಿ ಆಲಿಯಾ ಭಟ್ ಸೇರಿದಂತೆ ಕುಸ್ತಿಪಟು ಸಾಕ್ಷಿ ಮಲಿಕ್, ದೇವ್ ಪಟೇಲ್, ಸತ್ಯ ನಾಡೆಲ್ಲಾ, ಅಜಯ್ ಬಂಗಾ, ಜಿಗರ್ ಷಾ, ಅಸ್ಮಾ ಖಾನ್, ಪ್ರಿಯಂವದಾ ನಟರಾಜನ್ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಕೆಲಸದ ಮೂಲಕ ಪ್ರಭಾವ ಹೊಂದಿರುವ ವ್ಯಕ್ತಿಗಳನ್ನು ಗುರುತಿಸಲಾಗಿದೆ. ಕಲಾವಿದರು, ಐಕಾನ್‌ಗಳು, ಚಲನಚಿತ್ರ ತಾರೆಯರು, ಕ್ರೀಡಾಪಟುಗಳು, ವಿಜ್ಞಾನಿಗಳು, ರಾಜಕಾರಣಿಗಳು ಮತ್ತು ಉದ್ಯಮಿಗಳನ್ನು ಒಳಗೊಂಡಿದೆ. ಟೈಮ್ ಮ್ಯಾಗಜೀನ್ 2024ರ ಇಪ್ಪತ್ತೊಂದನೇ ವಾರ್ಷಿಕ ಪಟ್ಟಿಯಲ್ಲಿ ವಿಶ್ವದ ಬೇರೆ ಬೇರೆ ದೇಶಗಳ 100 ವ್ಯಕ್ತಿಗಳನ್ನು ಈ ಪ್ರಭಾವಶಾಲಿ ಪಟ್ಟಿಗೆ ಸೇರಿಸಲಾಗಿದೆ.







ಆಲಿಯಾ ಭಟ್:
ಬ್ರಿಟಿಷ್ ಪೌರತ್ವವನ್ನು ಹೊಂದಿರುವ ಆಲಿಯಾ ಭಟ್ ಭಾರತದಲ್ಲಿ ನೆಲೆಸಿದ್ದಾರೆ ಮತ್ತು ಹಿಂದಿ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ.



ದೇವ್ ಪಟೇಲ್
ಭಾರತೀಯ ಮೂಲದ ಬ್ರಿಟಿಷ್ ನಟ, ಇವರು ತಂದೆ -ತಾಯಿ ಮೂಲತ ಗುಜರಾತಿ ಮೂಲದವರು, ದೇವ್ ಪಟೇಲ್ ಅವರು “ಸ್ಲಮ್‌ಡಾಗ್ ಮಿಲಿಯನೇರ್” ಮೂಲಕ ಸಿನಿಮಾಕ್ಕೆ ಚೊಚ್ಚಲ ಪ್ರವೇಶ ಮಾಡಿದರು, ಇದು ಅವರನ್ನು 2008 ರಲ್ಲಿ ಅಂತರಾಷ್ಟ್ರೀಯ ಖ್ಯಾತಿಯನ್ನು ಪಡೆಯುವಂತೆ ಮಾಡಿತ್ತು. ಹಾಗೂ “ಮಂಕಿ ಮ್ಯಾನ್” ಸಿನಿಮಾದ ಮೂಲಕ ತಮ್ಮ ನಿರ್ದೇಶನವನ್ನು ಪ್ರಾರಂಭಿಸಿದರು.
ಸಾಕ್ಷಿ ಮಲಿಕ್
ಒಲಿಂಪಿಕ್ ಪದಕ ಗೆದ್ದ ಭಾರತದ ಮೊದಲ ಮತ್ತು ಏಕೈಕ ಮಹಿಳಾ ಕುಸ್ತಿಪಟು, ಸಾಕ್ಷಿ ಮಲಿಕ್ ಕಳೆದ ವರ್ಷ ಅಥ್ಲೀಟ್‌ಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿದ್ದ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆಯನ್ನು ನಡೆಸಿದ್ದರು.
ಸತ್ಯ ನಾಡೆಲ್ಲಾ
ಮೈಕ್ರೋಸಾಫ್ಟ್‌ನ ಕಾರ್ಯಕಾರಿ ಅಧ್ಯಕ್ಷ ಮತ್ತು ಸಿಇಒ ಸತ್ಯ ನಾದೆಲ್ಲಾ ಮೂರನೇ ಬಾರಿಗೆ ಟೈಮ್‌ನ ಅತ್ಯಂತ ಪ್ರಭಾವಶಾಲಿ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. OpenAI ನಲ್ಲಿ Microsoft ನ ಹೂಡಿಕೆಗಳು ಮತ್ತು Mistral AI ಜೊತೆಗಿನ ಪಾಲುದಾರಿಕೆಯೊಂದಿಗೆ, ಬೆಳೆಯುತ್ತಿರುವ AI ಆಂದೋಲನದಲ್ಲಿ ನಾಡೆಲ್ಲಾ ಮುಂಚೂಣಿಯಲ್ಲಿದ್ದಾರೆ. ಇವರು ಹೈದರಾಬಾದ್‌ನಲ್ಲಿ ಜನಿಸಿದ್ದು, ಸ್ಟೇಟ್ಸ್‌ಗೆ ತೆರಳುವ ಮೊದಲು ಕರ್ನಾಟಕದ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ ಪಡೆದಿದ್ದಾರೆ.
ಅಜಯ್ ಬಂಗಾ
ಭಾರತ ಮೂಲದ ಅಜಯ್ ಬಂಗಾ ಇಂದು ವಿಶ್ವಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಂಗಾ ಅವರು ಪುಣೆಯಲ್ಲಿ ಜನಿಸಿದ್ದು, ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಜಿಗರ್ ಷಾ
ಡೈರೆಕ್ಟರ್, ಜಿಗರ್ ಷಾ ಜಗತ್ತು ಹಿಂದೆಂದೂ ನೋಡದ ಅತಿದೊಡ್ಡ ಆರ್ಥಿಕ-ಅಭಿವೃದ್ಧಿ ಕಾರ್ಯಕ್ರಮವನ್ನು ನೀಡಿದ್ದಾರೆ.
ಅಸ್ಮಾ ಖಾನ್
ಬ್ರಿಟಿಷ್ ರೆಸ್ಟೋರೆಂಟ್ ಮತ್ತು ಅಡುಗೆ ಪುಸ್ತಕ ಲೇಖಕಿಯಾಗಿರುವ ಅಸ್ಮಾ ಖಾನ್ ಅವರು ಮಹಿಳೆಯರ ಮೆಚ್ಚಿನ ವ್ಯಕ್ತಿ, ಡಾರ್ಜಿಲಿಂಗ್ ಎಕ್ಸ್‌ಪ್ರೆಸ್ ಎಂಬ ಮೆಚ್ಚುಗೆ ಪಡೆದ ಲಂಡನ್ ರೆಸ್ಟೋರೆಂಟ್‌ನ ಹಿಂದಿನ ಶಕ್ತಿ ಕೂಡ ಹೌದು.
ಪ್ರಿಯಂವದಾ ನಟರಾಜನ್
ಪ್ರಿಯಂವದಾ ನಟರಾಜನ್ ಅವರು ಯೇಲ್ ವಿಶ್ವವಿದ್ಯಾನಿಲಯದಲ್ಲಿ ಖಗೋಳಶಾಸ್ತ್ರ ಮತ್ತು ಭೌತಶಾಸ್ತ್ರ ವಿಭಾಗಗಳಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಡಾರ್ಕ್ ಮ್ಯಾಟರ್ ಮತ್ತು ಡಾರ್ಕ್ ಎನರ್ಜಿ ಮ್ಯಾಪಿಂಗ್ ಮಾಡುವ ಕೆಲಸದಲ್ಲೂ ಹೆಸರು ಪಡೆದಿದ್ದಾರೆ. ನಟರಾಜನ್ ತಮಿಳುನಾಡಿನಲ್ಲಿ ಜನಿಸಿದ್ದು, ತಮ್ಮ ಶಿಕ್ಷಣವನ್ನು ಆರ್ಕೆ ಪುರಂನ ದೆಹಲಿ ಪಬ್ಲಿಕ್ ಸ್ಕೂಲ್ನಲ್ಲಿ ಮಾಡಿದ್ದಾರೆ.












