ಮಂಗಳೂರು: ದ.ಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 30 ರೂಟ್ ಮಾರ್ಚ್ ಮಾಡಲಾಗಿದೆ ಮತ್ತು ನಕ್ಸಲ್ ಪ್ರದೇಶದಲ್ಲಿ ಎಎನ್ಎಫ್ ಏರಿಯ ಡೋಮಿನೇಷನ್ ಮತ್ತು ಕೋಮಿಂಗ್ ಆಫರೇಷನ್ ಮಾಡಲಾಗಿದೆ ಎಂದು ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ ಬಿ ರಿಷ್ಯಂತ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 3 ಸಿಎಪಿಎಫ್ ತುಕಡಿ, 2 ಕೆಎಸ್ಆರ್ಫಿ ತುಕಡಿ ನಿಯೋಜನೆ ಮಾಡಲಾಗಿದೆ. ಒಟ್ಟು 1600 ಪೊಲೀಸ್ ಅಧಿಕಾರಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಜಿಲ್ಲೆಯಲ್ಲಿ 1200 ರೌಡಿಶೀಟರ್ ಮೇಲೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. 900 ರೌಡಿ ಶಿಟರ್ಗಳಿಂದ ಬಾಂಡ್ ಶೀಟ್ ಪಡೆಯಲಾಗಿದೆ. 28 ಮಂದಿಯನ್ನು ವಿವಿಧ ಜಿಲ್ಲೆಗಳಿಗೆ ಗಡಿಪಾರು ಮಾಡಲಾಗಿದೆ. 18 ನಕ್ಸಲ್ ಪ್ರದೇಶ ಗುರುತಿಸಲಾಗಿದ್ದು ಈ ಪ್ರದೇಶದಲ್ಲಿ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.