ಮಂಗಳೂರು: ಕಾಂಗ್ರೆಸ್ ಸರಕಾರದ ಗ್ಯಾರಂಟಿ ಬಗ್ಗೆ ಜನರಿಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಕಾರ್ಯಕ್ರಮ ತಲುಪದೆ ಇರುವವರೂ ಸಿಗುವ ಭರವಸೆಯಲ್ಲಿದ್ದಾರೆ. ಶೇ.100 ಗ್ಯಾರಂಟಿ ಮೂಲಕ ಜನ ಕೈ ಹಿಡಿಯಲಿದ್ದಾರೆ ಎಂದು ಕಾಂಗ್ರೆಸ್ ನ ದ.ಕ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹರೀಶ್ ಕುಮಾರ್, ಇದು ಪ್ರಾಮುಖ್ಯವಾದ ಚುನಾವಣೆ. ಈ ಬಾರಿ ರಾಜ್ಯದಲ್ಲಿ ಇಂಡಿಯಾ ಒಕ್ಕೂಟ 24 ಸೀಟುಗಳನ್ನು ಗೆಲ್ಲುವ ಸೂಚನೆ ಬರುತ್ತಿದೆ. ಬಿಜೆಪಿ ಈಗಾಗಲೇ ಸೋಲೊಪ್ಪಿದೆ. ಮೋದಿ ಹವಾ ಎಲ್ಲೂ ಕಾಣಿಸ್ತಾ ಇಲ್ಲ. ಮೋದಿ ಮೊದಲ ಬಾರಿ ಮಂಗಳೂರಿಗೆ ಬಂದಿದ್ದಾಗ ಲಕ್ಷಾಂತರ ಜನ ಬಂದಿದ್ರು. ಮೊನ್ನೆ ಬಂದಾಗ ಕೇವಲ 25 ಸಾವಿರ ಜನರನ್ನು ಸೇರಿಸಲು ಬಿಜೆಪಿಯವರಿಗೆ ಕಷ್ಟವಾಗಿದೆ. ಕಾರ್ಯಕರ್ತರು ಸ್ವಯಂ ಪ್ರೇರಿತವಾಗಿ ಬರುತ್ತಿಲ್ಲ. ಇಲ್ಲಿರುವುದು ಈಗ ಕೇವಲ ಗ್ಯಾರಂಟಿ ಹವಾ ಮಾತ್ರ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಶಾಸಕರಲ್ಲಿ ಮತ್ತು ಕಾರ್ಯಕರ್ತರಲ್ಲಿ ಸಹಮತವಿಲ್ಲ. ಅಭ್ಯರ್ಥಿ ಮಾತನಾಡಬಾರದು ಎಂಬ ಸೂಚನೆ ಅವರಿಗೆ ಪಕ್ಷದಿಂದ ಬಂದಿದೆ. ಬಣ ರಾಜಕಾರಣ ನಡೆದಿದ್ದು, ನಮಗೆ ಎಲ್ಲೂ ಪೈಪೋಟಿ ಕಾಣುತ್ತಿಲ್ಲ. ಕಾಂಗ್ರೆಸ್ ಹವಾ ಮಾತ್ರ ಕಾಣ್ತಿದೆ. ಮೋದಿ ಕೂಡ ಡೆಸ್ಪರೇಟ್ ಸ್ಪೀಚ್ ಮಾಡುತ್ತಿದ್ದಾರೆ. ಪ್ರಧಾನಿಯಿಂದ ತೂಕದ ಮಾತುಗಳಿಲ್ಲ. ಮಂಗಳಸೂತ್ರ ಬಗ್ಗೆ, ಮುಸ್ಲಿಮರಿಗೆ ಸಂಪತ್ತು ಹಂಚಿಕೆ ಬಗ್ಗೆ ಇದೆಲ್ಲ ಪಿಎಂ ಹೇಳುವ ಮಾತುಗಳಲ್ಲ. ಜನರ ಸಮಸ್ಯೆಗಳ ಬಗ್ಗೆಯಾಗಲಿ, ಬೆಲೆ ಏರಿಕೆ ಬಗ್ಗೆಯಾಗಲಿ ಮಾತನಾಡದೆ ಊಹಾಪೋಹದ ಮಾತುಗಳನ್ನಾಡಿ ಓಟು ಗಿಟ್ಟಿಸುವ ಪ್ರಯತ್ನ ಮಾಡ್ತಿದಾರೆ. 50% ಜನ ಯಾರಿಗೆ ಓಟು ಅಂತ ಆಲೋಚನೆ ಮಾಡ್ತಾರೆ. ಕಾಂಗ್ರೆಸನ್ನು ಜನ ನಂಬಿದ್ದಾರೆ, ಕೇಂದ್ರದ ಬಗ್ಗೆ ಭ್ರಮನಿರಸನರಾಗಿದ್ದಾರೆ, ಕೈ ಬಂದರೆ ಭರವಸೆ ಈಡೇರಿಸ್ತದೆ ಎನ್ನುವ ಭರವಸೆ ಜನರಿಗೆ. ಇದೇ ವಿಶ್ವಾಸದಿಂದ ಕೈ ಗೆಲ್ಲಲಿದೆ. ಜೆಡಿಎಸ್ ನ ಬಹುತೇಕ ಮಂದಿ ಕಾಂಗ್ರೆಸ್ ಸೇರಿದ್ದಾರೆ, ಹಾಗಾಗಿ ದ.ಕ.ದಲ್ಲಿ ಈಗ ಜೆಡಿಎಸ್ ಇಲ್ಲ. ಜೆಡಿಎಸ್ ಬಿಜೆಪಿ ಸೇರಿದ್ದೂ ನಮಗೆ ಪ್ಲಸ್ ಆಗಲಿದೆ. ಇದೇ ಅವರಿಗೆ ಒಳ ಏಟು ನೀಡೋದು ಖಚಿತ. 24 ಕ್ಷೇತ್ರಗಳಲ್ಲಿ ಕೈ ಗೆಲ್ತದೆ, ದ.ಕ., ಉಡುಪಿ ಅದರಲ್ಲಿ ಸೇರಲಿದೆ. ಯುವಕರು ಸ್ಟೈಫಂಡ್ ಸಹಾಯ ಪಡೆದಿದ್ದು, ಹೊಸ ಓಟರ್ ಗಳು ಕಾಂಗ್ರೆಸ್ ಗೆ ದೊರೆಯಲಿದೆ. 6 ರಿಂದ 7 ಎಂಎಲ್ಸಿಗಳು, ಎಂಪಿಗಳು, ಎಕ್ಸ್ ಎಂಎಲ್ಎಗಳು ಕಾಂಗ್ರೆಸ್ ಸೇರ್ಪೆಡೆಗೊಂಡಿದ್ದಾರೆ. ಕವಿತಾ ಸನಿಲ್ ಬಿಜೆಪಿ ಸೇರ್ಪಡೆಯಾಗಿರೋದು ದೊಡ್ಡ ಇಶ್ಯೂ ಆಗಿ ತಕೊಂಡಿಲ್ಲ ಎಂದು ಹೇಳಿದರು. ಕಾಂಗ್ರೆಸ್ ನ ಹಲವು ನಾಯಕರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.