ಮಂಗಳೂರು(ಬೆಂಗಳೂರು): ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಚುನಾವಣಾ ಪ್ರಚಾರದ ವೇಳೆ ಕುಸಿದು ಬಿದ್ದ ಘಟನೆ ಬುಧವಾರ(ಎ.24) ವರದಿಯಾಗಿದೆ.
ವಿಪರೀತ ಬಿಸಿಲಿನಿಂದ ಬಸವಳಿದಿದ್ದ ಅವರು ತೀವ್ರ ಸುಸ್ತಾಗಿ ಕುಸಿದು ಬಿದಿದ್ದಾರೆ. ನಂತರ ಬಿಜೆಪಿ ಕಾರ್ಯಕರ್ತರು ಹಾಗೂ ಅಂಗರಕ್ಷಕರು ಸಭೆಯ ವೇದಿಕೆಯಿಂದ ಅವರನ್ನು ಬೇರೆ ಸ್ಥಳಕ್ಕೆ ಕರೆದುಕೊಂಡು ಹೋದರು. ಮಹಾರಾಷ್ಟ್ರದ ಯವತ್ಮಾಲ್‌ನಲ್ಲಿ ಪಕ್ಷದ ಚುನಾವಣೆ ರ‍್ಯಾಲಿಯಲ್ಲಿ ನಿತಿನ್ ಗಡ್ಕರಿ ಭಾಗವಹಿಸಿದ್ದರು. ವೇದಿಕೆಯ ಮೇಲೆ ರ‍್ಯಾಲಿ ಉದ್ದೇಶಿಸಿ ಮಾತನಾಡುವಾಗ ಅವರು ಕುಸಿದು ಬಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಕೆಲ ಸಮಯದ ಬಳಿಕ ಚೇತರಿಸಿಕೊಂಡಿರುವ ಗಡ್ಕರಿ ಅವರು ಆರೋಗ್ಯವಾಗಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಹೇಳಿದ್ದಾರೆ.
Nitin Gadkari's health took a hit during the election campaign in Yavatmal, Maharashtra, due to excessive heat. Thankfully, he's doing well now. pic.twitter.com/fLjq3kOnkX
— Political Kida (@PoliticalKida) April 24, 2024