ಮಂಗಳೂರು: ಜಾರ್ಚ್ ಪೆರ್ನಾಂಡಿಸ್ ಅವರನ್ನು ಆದರ್ಶವಾಗಿ ಇಟ್ಟುಕೊಂಡು ರಾಜಕಾರಣ ಮಾಡುತ್ತೇನೆ.ಹಿಂದುತ್ವಕ್ಕೆ ಬದ್ದನಾಗಿದ್ದು ಅಭಿವೃದ್ಧಿಗೆ ಆದ್ಯತೆ ನೀಡಿ ಕೆಲಸ ಮಾಡುತ್ತೇನೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಕಾರ್ಯಕರ್ತನಾದ ನನಗೆ ಬಿಜೆಪಿ ಅವಕಾಶ ನೀಡಿದೆ. ವೀರ ಯೋಧರ ಸ್ಮಾರಕಕ್ಕೆ ಸ್ಮರಿಸಿ ಪ್ರಚಾರ ಕಾರ್ಯ ಆರಂಭ ಮಾಡಿದ್ದೆ. ಕಾರ್ಮಿಕ ಮಹಿಳೆಯರು ನನಗೆ ಠೇವಣಿ ಇಡಲು ಹಣ ನೀಡಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಯಂದಿರ ಮಗನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಮಂಗಳೂರು ಬೆಂಗಳೂರು ಶಿರಾಡಿ ಘಾಟ್ ಮೂಲಕ ರಸ್ತೆ, ರೈಲ್ವೆ ಕಾಮಗಾರಿ ನಡೆಸುತ್ತೇನೆ. ‘ಬ್ಯಾಕ್ ಟೂ ಊರು’ ಕಾಂಸೆಪ್ಟ್ ಮೂಲಕ ಜಿಲ್ಲೆಯ ಅಭಿವೃದ್ಧಿ ಮಾಡಲಾಗುವುದು. ಫಿಲ್ಮ್ ಸಿಟಿ ಸ್ಥಾಪನೆಗೂ ಪ್ರಯತ್ನ ಮಾಡುತ್ತೇವೆ. ಪ್ರವಾಸೋದ್ಯಮ ಅಭಿವೃದ್ಧಿಗೂ ವಿಶೇಷ ಆದ್ಯತೆ ನೀಡುವುದಾಗಿ ಈ ಸಂದರ್ಭದಲ್ಲಿ ಬ್ರಿಜೇಶ್ ಚೌಟ ಹೇಳಿದರು.