ಬೆಳ್ತಂಗಡಿಯ ಬಾಂಜಾರುಮಲೆ ಮತಗಟ್ಟೆಯಲ್ಲಿ ದಾಖಲೆಯ ಶೇ.100 ಮತದಾನ

ಮಂಗಳೂರು/ಬೆಳ್ತಂಗಡಿ: ಲೋಕಸಭಾ ಚುನಾವಣೆಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನೆರಿಯ ಗ್ರಾಮದ ಬಾಂಜಾರುಮಲೆ ಮತಗಟ್ಟೆಯಲ್ಲಿ ಶೇ.100ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ಚಾರ್ಮಾಡಿ ಘಾಟಿಯ ತಪ್ಪಲಿನಲ್ಲಿರುವ ಈ ಮತಗಟ್ಟೆಯಲ್ಲಿ 111 ಮತದಾರರಿದ್ದು, ಸಂಜೆ 4ರ ವೇಳೆಗೆ ಎಲ್ಲಾ 111 ಮತದಾರರು ಮತದಾನ ಮಾಡುವ ಮೂಲಕ ಶೇ.100 ಮತದಾನವಾಗಿದೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಇಲ್ಲಿ ಶೇ.99ರಷ್ಟು ಮತದಾನವಾಗಿತ್ತು.

LEAVE A REPLY

Please enter your comment!
Please enter your name here