ನೈನಿತಾಲ್‌ ಪ್ರದೇಶದಲ್ಲಿ ಕಾಡ್ಗಿಚ್ಚು-ಸೇನೆಗೆ ಬುಲಾವ್-ಉತ್ತರಾಖಂಡದ ವಿವಿಧೆಡೆ ಕಾಡ್ಗಿಚ್ಚಿಗೆ 33.34 ಹೆಕ್ಟೇರ್‌ ಅರಣ್ಯ ನಾಶ

ಮಂಗಳೂರು(ನೈನಿತಾಲ್): ಉತ್ತರಾಖಂಡದ ನೈನಿತಾಲ್‌ ಪ್ರಾಂತ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ನಿಯಂತ್ರಣಕ್ಕೆ ಬಾರದೆ ಕಳೆದ 36 ಗಂಟೆಗಳಿಗೂ ಹೆಚ್ಚು ಕಾಲದಿಂದ ಕಾಡ್ಗಿಚ್ಚು ವ್ಯಾಪಕವಾಗಿ ಹರಡುತ್ತಿದ್ದು ನಿಯಂತ್ರಣಕ್ಕಾಗಿ ಭಾರತೀಯ ವಾಯು ಸೇನೆ ಮತ್ತು ಸೇನೆಯನ್ನು ಕರೆಸಲಾಗಿದೆ.

ಚಿತ್ರ ಕೃಪೆ:‌ ಹಿಂದೂಸ್ಥಾನ್‌ ಟೈಮ್ಸ್

ಕಾಡ್ಗಿಚ್ಚು ನೈನಿತಾಲದ ಪೈನ್ಸ್‌ ಪ್ರದೇಶದಲ್ಲಿರುವ ಹೈಕೋರ್ಟ್‌ ಕಾಲನಿಯ ಸಮೀಪವೂ ಹರಡಿದ್ದು, ಈ ಪ್ರದೇಶದಲ್ಲಿ ವಾಹನ ಸಂಚಾರಕ್ಕೂ ಧಕ್ಕೆ ಉಂಟಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ವಿವಿಧೆಡೆಯಿಂದ ಕಾಡ್ಗಿಚ್ಚು ಪ್ರಕರಣಗಳು ವರದಿಯಾಗಿದ್ದು 33.34 ಹೆಕ್ಟೇರ್‌ ಅರಣ್ಯ ಪ್ರದೇಶ ನಾಶವಾಗಿದೆ ಎನ್ನಲಾಗಿದೆ. ನೈನಿ ಸರೋವರದಲ್ಲಿ ಬೋಟಿಂಗ್‌ ನಿಷೇಧಿಸಲಾಗಿದೆ. ಕಳೆದ ವರ್ಷದ ನವೆಂಬರ್‌ 1ರಿಂದ ರಾಜ್ಯದಲ್ಲಿ 575 ಕಾಡ್ಗಿಚ್ಚು ಪ್ರಕರಣಗಳು ವರದಿಯಾಗಿದ್ದು 689.89 ಹೆಕ್ಟೇರ್‌ ಅರಣ್ಯ ಭೂಮಿ ನಾಶಗೊಂಡಿತ್ತು. ಜಖೋಲಿ ಮತ್ತು ರುದ್ರಪ್ರಯಾಗ್‌ ಎಂಬಲ್ಲಿ ಅರಣ್ಯ ಪ್ರದೇಶಗಳಿಗೆ ಬೆಂಕಿ ಹಚ್ಚಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ.

LEAVE A REPLY

Please enter your comment!
Please enter your name here