ಮೇ.8ರಿಂದ ರಾಜ್ಯದಲ್ಲಿ ಹಜ್ ಯಾತ್ರೆ ಆರಂಭ – ಮುಖ್ಯಮಂತ್ರಿಯಿಂದ ಚಾಲನೆ ?

ಮಂಗಳೂರು (ಬೆಂಗಳೂರು): ಮೇ.8 ರಿಂದ ಹಜ್ ಯಾತ್ರೆ ಪ್ರಾರಂಭವಾಗಲಿದೆ. ಬೆಂಗಳೂರಿನಿಂದ ತೆರಳುವ ಮೊದಲ ವಿಮಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವ ಸಾಧ್ಯತೆ ಇದೆ.

ದ.ಕ ದಿಂದ ಹಜ್‌ ಗೆ ತೆರಳುವವರ ವಿವರ ಹಳದಿ ಪಟ್ಟಿಯಲ್ಲಿ ಗುರುತಿಸಲಾಗಿದೆ.
ದ.ಕ ದಿಂದ ಹಜ್‌ ಗೆ ತೆರಳುವವರ ವಿವರ ಹಳದಿ ಪಟ್ಟಿಯಲ್ಲಿ ಗುರುತಿಸಲಾಗಿದೆ.

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಪ್ರಕ್ರಿಯೆ ಮೇ.7ರಂದು ಮುಕ್ತಾಯಗೊಳ್ಳಲಿದೆ. ಮೇ.8 ರಂದು ರಾಜ್ಯದ ಹಜ್ ಯಾತ್ರಿಕರನ್ನು ಬೀಳ್ಕೊಡುವ ಕಾರ್ಯಕ್ರಮ ಆಯೋಜಿಸಲು ಕರ್ನಾಟಕ ಹಜ್ ಸಮಿತಿ ಚಿಂತನೆ ನಡೆಸಿದೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಹಾಗೂ ಇಬ್ಬರು ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಮತಿ ನೀಡಬೇಕೆಂದು ಸಮಿತಿಯು ಈಗಾಗಲೇ ಭಾರತ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

ಈ ಬಾರಿ ಕರ್ನಾಟಕ ಹಜ್‌ ಸಮಿತಿ 13,500 ಅರ್ಜಿಗಳನ್ನು ಸ್ವೀಕರಿಸಿದ್ದು, ಅದರಲ್ಲಿ 10,500 ಅರ್ಜಿದಾರರು ಕರ್ನಾಟಕದಿಂದ ಈ ಬಾರಿ ಹಜ್‌ ಗೆ ತೆರಳಲಿದ್ದಾರೆ.

LEAVE A REPLY

Please enter your comment!
Please enter your name here