ಮಂಗಳೂರು(ಮಸ್ಕಿ): ಬಿಸಿಲಿನ ತಾಪಮಾನಕ್ಕೆ ಮಸ್ಕಿ ತಾಲ್ಲೂಕಿನ ಹಸಮಕಲ್ ಗ್ರಾಮದ ಮಲ್ಲಯ್ಯ ಬಿಎಂಟಿಸಿ ಕಂಡಕ್ಟರ್ ಮಲ್ಲಯ್ಯ ಎಂಬುವರು ಶುಕ್ರವಾರ(ಮೇ.3) ಮಧ್ಯಾಹ್ನದ ಮೃತಪಟ್ಟಿದ್ದಾರೆ.
ಹಸಮಕಲ್ ಗ್ರಾಮದವರಾದ ಇವರು ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಕೆಲಸದ ನಿಮಿತ್ತ ಗ್ರಾಮಕ್ಕೆ ಆಗಮಿಸಿದ್ದ ಇವರು ಮಸ್ಕಿ ಪಟ್ಟಣಕ್ಕೆ ವೈಯಕ್ತಿಕ ಕೆಲಸದ ಮೇಲೆ ತೆರಳಿ ಪಟ್ಟಣದಲ್ಲಿ ನಡೆದುಕೊಂಡು ಹೋಗುವ ವೇಳೆ ಬಿಸಿಲಿನ ತಾಪಕ್ಕೆ ಕುಸಿದು ಬಿದ್ದಿದ್ದಾರೆ. ಸ್ಥಳದಲ್ಲಿದ್ದ ಸಾರ್ವಜನಿಕರು ಪಟ್ಟಣದ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.