317 ಕಿಲೋ ತೂಗುವ ಜಗತ್ತಿನ ಭಾರದ ವ್ಯಕ್ತಿ ಬಾರದ ಲೋಕಕ್ಕೆ 

ಮಂಗಳೂರು(ಲಂಡನ್): 317 ಕಿಲೋ ತೂಗುವ‌ ಜಗತ್ತಿನ ಅತಿ ಭಾರದ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದ ಲಂಡನ್ನಿನ 34ರ ಹರೆಯದ ಜಾನ್ ಸನ್ ಹಾರ್ಟನ್ ಬಹು ಅಂಗಾಂಗ ವೈಫಲ್ಯಕ್ಕೆ ಒಳಗಾಗಿ ನಿಧನರಾಗಿದ್ದಾರೆ.

ಅಮಿತವಾಗಿ ಆಹಾರ ಸೇವಿಸುತ್ತಿದ್ದ ಜಾನ್ ಸನ್ ಪ್ರತಿದಿನ 10,000 ಕ್ಯಾಲರಿಯ ಆಹಾರವನ್ನು ಸೇವಿಸುತ್ತಿದ್ದರು. 2020ರಲ್ಲಿ ತಮ್ಮ ಫ್ಲ್ಯಾಟ್ ನಲ್ಲಿ ಕುಸಿದು ಬಿದ್ದಿದ್ದ ಜಾನ್ ಸನ್ ಅವರನ್ನು 30ಕ್ಕಿಂತಲೂ ಅಧಿಕ ಅಗ್ನಿಶಾಮಕ ದಳದ ಪಡೆ ಕ್ರೈನ್ ಸಹಾಯದಿಂದ ಎದ್ದು ನಿಲ್ಲಿಸಲಾಗಿತ್ತು. ನನ್ನ ಬದುಕಿನ ಅತ್ಯಂತ ವಿಷಾದ ಪೂರ್ವಕ ದಿನ ಎಂದು ಆ ಸನ್ನಿವೇಶವನ್ನು ಜಾನ್ ಸನ್ ವಿವರಿಸಿದ್ದರು. ಇತ್ತೀಚಿನ ಕೆಲವು ದಿನಗಳಿಂದ ಅಲುಗಾಡುವುದಕ್ಕೂ ಸಾಧ್ಯವಾಗದೆ ಹಾಸಿಗೆಗೆ ಸೀಮಿತವಾಗಿದ್ದ ಜಾನ್ ಸನ್ ಉಸಿರು ಚೆಲ್ಲಿದ್ದಾರೆ.

LEAVE A REPLY

Please enter your comment!
Please enter your name here