ಮಂಗಳೂರು: ಮಂಗಳೂರಿನ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ನಗರದ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇ.6 ರಂದು ಸಂಜೆ 3.30 ಗಂಟೆಗೆ ಕಸ್ತೂರ್ಬಾ ಕಾಲೇಜಿನ 1 ನೇ ಮಹಡಿಯಲ್ಲಿರುವ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ರಿಂಗ್ ಆಗಿದೆ. ಈ ವೇಳೆ ಭದ್ರತಾ ಸಿಬ್ಬಂದಿ ಹೋಗಿ ಪರಿಶೀಲನೆ ನಡೆಸಿದಾಗ ಟಾಯ್ಲೆಟ್ ನಲ್ಲಿ ಯಾರೂ ಇರಲ್ಲಿಲ್ಲ. ಅಲ್ಲದೆ ಮೊಬೈಲ್ ನ್ನು ಎಕ್ಸಾಸ್ಟ್ ಫ್ಯಾನ್ ಬಳಿ ಇಡಲಾಗಿದ್ದು ಕಂಡು ಬಂದಿದೆ. ಟಾಯ್ಲೆಟ್ ಗೆ ಬರುವ ಮಹಿಳೆಯರ ದೃಶ್ಯ ಸೆರೆ ಮಾಡಲು ಇರಿಸಿದ ಸ್ಥಿತಿಯಲ್ಲಿ ಮೊಬೈಲ್ ಕಂಡು ಬಂದಿದೆ ಎನ್ನಲಾಗಿದೆ. ಈ ಬಗ್ಗೆ ಮಂಗಳೂರಿನ ಬಂದರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಾದ ಬೆನ್ನಲ್ಲೇ 17ರ ಹರೆಯದ ಅಪ್ರಾಪ್ತ ಬಾಲಕನನ್ನು ಪೋಲಿಸರು ವಶಕ್ಕೆ ಪಡೆದಿದ್ದು, ಬಾಲನ್ಯಾಯ ಮಂಡಳಿ ಮುಂದೆ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.