ಕೊನೆಗೂ ದಾವೂದ್ ಬಂಧನ-ಮುಂಬೈ ಪೊಲೀಸರಿಂದ ಬಂಧನ

ಮಂಗಳೂರು(ಮುಂಬೈ): ಕಳೆದ 40 ವರ್ಷಗಳಿಂದ ತಲೆಮರೆಸಿಕೊಂಡಿದ್ದ ದಾವುದ್‌ನನ್ನು ಕೊನೆಗೂ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆಗ್ರಾ ಮೂಲದ 70 ವರ್ಷದ ಪಾಪ ಅಲಿಯಾಸ್ ದಾವೂದ್ ಅತ್ಯಾಚಾರ ಪ್ರಕರಣವೊಂದರಲ್ಲಿ ಪೊಲೀಸರಿಗೆ ಬೇಕಾಗಿದ್ದು, ಈತ ವೇಷ ಮರೆಸಿ ತಿರುಗಾಡುತ್ತಿದ್ದ ಎನ್ನಲಾಗಿದೆ.

ವಿಶೇಷ ಕಾರ್ಯಾಚರಣೆ ನಡೆಸಿದ ಡಿಬಿ ಮಾರ್ಗ್‌ ಠಾಣೆ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಅತ್ಯಾಚಾರ ಪ್ರಕರಣವೊಂದರಲ್ಲಿ ಈತ 1984ರಲ್ಲಿ ಬಂಧಿತನಾಗಿದ್ದ. ಸೆಷನ್ ಕೋರ್ಟ್‌ನಲ್ಲಿ ಈತನ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಪ್ರಕರಣದ ವಿಚಾರಣೆಗೆ ಈತ ಸತತವಾಗಿ ಗೈರಾಗಿದ್ದ ಈ ಹಿನ್ನೆಲೆಯಲ್ಲಿ ಈತ ತಲೆಮರೆಸಿಕೊಂಡಿದ್ದಾನೆ ಎಂದು ಘೋಷಿಸಿದ್ದ ಕೋರ್ಟ್ ಈತನ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಿತ್ತು. ಉತ್ತರ ಪ್ರದೇಶದ ಆಗ್ರಾದಲ್ಲಿ ಇದ್ದಾನೆ ಎಂಬ ಮಾಹಿತಿ ಆಧರಿಸಿ ಆರೋಪಿಯ ನಿವಾಸದ ಸುತ್ತ ಕಣ್ಗಾವಲು ಇರಿಸಲಾಗಿತ್ತು. ನಂತರ ತಾಂತ್ರಿಕ ವಿಧಾನಗಳನ್ನು ಬಳಸಿ ಮಾಹಿತಿ ಕಲೆಹಾಕಿ ದಾವೂದ್‌ಗೆ ಬಲೆ ಬೀಸಿ ಬಂಧಿಸಲಾಯ್ತು, ಪ್ರಸ್ತುತ ಆತನನ್ನು ಟ್ರಾನ್ಸಿಟ್ ರಿಮಾಂಡ್ ಮೇಲೆ ಮುಂಬೈಗೆ ಕರೆತರಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 

LEAVE A REPLY

Please enter your comment!
Please enter your name here