ಒಳಗೆ ಸೇರಿದರೆ ಗುಂಡು, ಹುಡುಗಿಯಾಗುವಳು ಗಂಡು-ಎಣ್ಣೆ ಏಟಲ್ಲಿ ನಡು ರಸ್ತೆಯಲ್ಲಿ ಯುವತಿಯ ರಂಪಾಟ

ಮಂಗಳೂರು(ಕಾನ್ಪುರ): ಒಳಗೆ ಸೇರಿದರೆ ಗುಂಡು, ಹುಡುಗಿಯಾಗುವಳು ಗಂಡು ಜನಪ್ರಿಯ ಕನ್ನಡ ಚಿತ್ರಗೀತೆಯೊಂದರ ಸನ್ನಿವೇಶದಂತೆ  ಕುಡಿದ ನಶೆಯಲ್ಲಿ ಯುವತಿಯೊಬ್ಬಳು ಮಾಡಿದ ರಂಪಾಟ ಇದೀಗ ಭಾರೀ ಸುದ್ದಿಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಉತ್ತರ ಪ್ರದೇಶದ ಕಾನ್ಪುರದಲ್ಲಿ ಪಾನಮತ್ತ ಯುವತಿಯೊಬ್ಬಳು ಸಾರ್ವಜನಿಕರು ಓಡಾಡುವ ರಸ್ತೆಯಲ್ಲಿ ಡ್ರಾಮಾ ಸೃಷ್ಟಿಸಿದ್ದಾಳೆ. ಆಕೆಯ ರಂಪಾಟ ಕಂಡು ಆ ಪ್ರದೇಶದಲ್ಲಿ ಜನಸಾಗರವೇ ನೆರೆದಿತ್ತು. ಈ ಘಟನೆಯನ್ನು ಕೆಲವರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಯುವತಿ ರಸ್ತೆಯಲ್ಲಿ ಗಲಾಟೆ ಮಾಡುತ್ತಿರುವುದನ್ನು ಕಾಣಬಹುದು. ಈ ವೇಳೆ ಪೊಲೀಸರು ಸ್ಥಳಕ್ಕಾಗಮಿಸಿದಾಗ ಪೊಲೀಸರ ಜೊತೆ ಕೂಡ ಆಕೆ ಜಗಳಕ್ಕಿಳಿದಿದ್ದಾಳೆ. ಕಾನ್ಪುರದ ಗುಮ್ಟಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮದ್ಯದ ಅಮಲಿನಲ್ಲಿದ್ದ ಯುವತಿಯೊಬ್ಬಳ ಬಳಿ ಪೊಲೀಸರು ಪ್ರಶ್ನಿಸಲು ಹೋದಾಗ ಆಕೆ ಪೊಲೀಸರ ಜೊತೆಯೇ ವಾಗ್ವಾದಕ್ಕೆ ಮುಂದಾಗಿದ್ದಾಳೆ. ಅಷ್ಟೇ ಅಲ್ಲ ಪೊಲೀಸರು ಗದರಿದಾಗ ತನ್ನ ಬಟ್ಟೆಯನ್ನು ತಾನೇ ಹರಿಯಲು ಮುಂದಾಗಿದ್ದಾಳೆ.

LEAVE A REPLY

Please enter your comment!
Please enter your name here