ಮಂಗಳೂರು(ಕಾಸರಗೋಡು): ಸದಸ್ಯರ ಗಮನಕ್ಕೆ ತಾರದೆ ಸುಮಾರು 4.76 ಕೋಟಿ ರೂ ಸಾಲ ತೆಗೆದು ಸಹಕಾರಿ ಸಂಸ್ಥೆಯ ಕಾರ್ಯದರ್ಶಿ ಪರಾರಿಯಾದ ಘಟನೆ ಕಾರಡ್ಕದಲ್ಲಿ ನಡೆದಿದೆ.
ಕಾರಡ್ಕ ಕೃಷಿ ಸಹಕಾರಿ ಸಂಸ್ಥೆಯ ಕಾರ್ಯದರ್ಶಿ ಕೆ .ರತೀಶ್ ವಿರುದ್ಧ ಆದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೊಸೈಟಿ ಅಧ್ಯಕ್ಷ ಸೂಫಿ ನೀಡಿದ ದೂರಿನಂತೆ ವಂಚನೆ ಪ್ರಕರಣ ದಾಖಲಿಸಲಾಗಿದೆ. ರತೀಶ್ ಸಂಸ್ಥೆಗೆ ಬಂದಿಲ್ಲ . ರಜೆ ಅರ್ಜಿ ನೀಡಿಲ್ಲ . ಸಂಪರ್ಕಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ . ಇದರಿಂದ ಸಂಶಯಗೊಂಡು ಸಹಾಯಕ ನೋಂದಣಾಧಿಕಾರಿ ರವರಲ್ಲಿ ತಪಾಸಣೆಗೆ ಸೂಚನೆ ನೀಡಿದ್ದು , ತಪಾಸಣೆ ವೇಳೆ ಭಾರೀ ವಂಚನೆ ಬೆಳಕಿಗೆ ಬಂದಿದೆ. ಬ್ಯಾಂಕ್ ನಲ್ಲಿ ಹಲವಾರು ಮಂದಿ ಚಿನ್ನಾಭರಣ ವನ್ನು ಅಡವಿಟ್ಟ ಬಗ್ಗೆ ನಕಲಿ ದಾಖಲೆ ಸೃಷ್ಟಿಸಿ ಹಣವನ್ನು ವಂಚಿಸಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ .