



ಮಂಗಳೂರು(ವಿಜಯಪುರ): ನಾಲ್ಕು ತಿಂಗಳ ಹಿಂದಷ್ಟೇ ಅದ್ದೂರಿಯಾಗಿ ಮದುವೆ ರಿಸೆಪ್ಶನ್ ಮಾಡಿಕೊಂಡು ಅಧಿಕೃತವಾಗಿ ಒಂದಾಗಿದ್ದ ನವ ಜೋಡಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಜಯಪುರ ನಗರ ಹೊರವಲಯದ ಶ್ರೀ ಸಿದ್ದೇಶ್ವರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.







ಮನೋಜ್ ಪೋಳ್(30), ರಾಖಿ (25) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ನವದಂಪತಿ. ಕಳೆದ ನಾಲ್ಕು ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದರು. ನಾಲ್ಕು ತಿಂಗಳ ಹಿಂದಷ್ಟೇ ಮದುವೆ ರಿಸೆಪ್ಶನ್ ಮಾಡಿಕೊಳ್ಳುವ ಮೂಲಕ ಅಧಿಕೃತವಾಗಿ ಒಂದಾಗಿದ್ದರು. ಇತ್ತೀಚೆಗೆ ಇವರಿಬ್ಬರ ನಡುವೆ ಸಣ್ಣ ಪುಟ್ಟ ಜಗಳ ನಡೆಯುತ್ತಿತ್ತು. ಮಂಗಳವಾರ ರಾತ್ರಿಯೂ ಜಗಳವಾಗಿದ್ದು, ಮನೋಜ್ ಚಿಕ್ಕಪ್ಪ ಮನೆಗೆ ಬಂದು ಸಮಾಧಾನ ಮಾಡಿ ಹೋಗಿದ್ದರು. ಆದರೆ ಅದೇ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ರಾತ್ರಿ ಇಬ್ಬರು ನೇಣಿಗೆ ಶರಣಾಗಿದ್ದಾರೆ. ಊರಿಗೆ ಹೋಗಿದ್ದ ಕುಟುಂಬಸ್ಥರು ಬೆಳಗಿನ ಜಾವ ಮನೆಗೆ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಹಗ್ಗ ತುಂಡಾಗಿ ಮನೋಜ್ ಶವ ಕೆಳಗೆ ಬಿದ್ದಿದ್ದರೆ, ರಾಖಿ ಶವ ನೇಣು ಬಿಗಿದ ಸ್ಥಿತಿಯಲ್ಲೇ ಪತ್ತೆಯಾಗಿದೆ.














