ಸ್ಲೋವಾಕಿಯಾ ಪ್ರಧಾನಿಯ ಹತ್ಯೆಗೆ ಸಂಚು-ರಾಬರ್ಟ್ ಫಿಕೋ ಮೇಲೆ ಗುಂಡಿನ ದಾಳಿ

ಮಂಗಳೂರು(ಸ್ಲೋವಾಕಿಯಾ): ಸ್ಲೋವಾಕಿಯಾ ದೇಶದ ಪ್ರಧಾನಿ ರಾಬರ್ಟ್ ಫಿಕೋ ಮೇಲೆ ಸತತ ಗುಂಡಿನ ದಾಳಿ‌ ನಡೆಸಲಾಗಿದ್ದು, ಜೀವನ್ಮರಣ ಹೋರಾಟದಲ್ಲಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಫಿಕೋ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ಹೆಲಿಕಾಪ್ಟರ್ ಮೂಲಕ ಬೈಸ್ಟ್ರಿಕಾಗೆ ಸ್ಥಳಾಂತರಿಸಲಾಗಿದೆ. ರಾಬರ್ಟ್‌ಗೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಮುಂದಿನ ಕೆಲ ಗಂಟೆ ಅತ್ಯಂತ ಮಹತ್ವದ್ದು ಎಂದು ಆಸ್ಪತ್ಪೆ ಮೂಲಗಳು ಹೇಳಿವೆ. ಪ್ರಧಾನಿ ಫಿಕೋ ಹತ್ಯೆಗೆ ಸಂಚು ರೂಪಿಸಿ ಹ್ಯಾಂಡ್ಲೋವಾ ನಗರದಲ್ಲಿ ಈ ಗುಂಡಿನ ದಾಳಿ ನಡೆಸಲಾಗಿದೆ. ರಾಬರ್ಟ್ ಫಿಕೋ ಹೊಟ್ಟೆಯ ಕೆಳಭಾಗಕ್ಕೆ ಗುಂಡು ತಗುಲಿದೆ. ಹ್ಯಾಂಡ್ಲೋವಾದ ಕಲ್ಚರಲ್ ಹೌಸ್‌ನಲ್ಲಿ ಆಯೋಜಿಸಲಾಗಿದ್ದ ಸಭೆಗೆ ರಾಬರ್ಟ್ ಫಿಕೋ ಆಗಮಿಸುತ್ತಿದ್ದ ವೇಳೆ ಗುಂಡಿನ ದಾಳಿ ನಡೆಸಲಾಗಿದೆ. ಇತರ ನಾಯಕರು, ಪೊಲೀಸರು ಹಾಗೂ ಪ್ರಧಾನಿ ಅಂಗ ರಕ್ಷಕರ ಸಮ್ಮುಖದಲ್ಲೇ ಈ ಘಟನೆ ನಡೆದಿದೆ.ಗುಂಡಿನ ಚಕಮಕಿ ಆರಂಭಗೊಳ್ಳುತ್ತಿದ್ದಂತೆ ತೀವ್ರ ಗಾಯಗೊಂಡಿದ್ದ ರಾಬರ್ಟ್ ಫಿಕೋ ಅವರನ್ನು ರಕ್ಷಿಸಿ ಪ್ರಧಾನಿ ಬುಲೆಟ್ ಪ್ರೂಫ್ ಕಾರಿನಲ್ಲಿ ಕೂರಿಸಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡಿನ ದಾಳಿ ನಡೆಸಿದ ಆಪರಿಚಿತನನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ಆರಂಭಗೊಂಡಿದ್ದು, ಸ್ಲೋವಾಕಿಯಾದಲ್ಲಿ ಎಲ್ಲೆಡೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

LEAVE A REPLY

Please enter your comment!
Please enter your name here