ಮಂಗಳೂರು: ರಾಜ್ಯ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಹೊಂದಿದರೆ ಸರಕಾರ ಕೈಗೊಳ್ಳುವ ನಿರ್ಧಾರಗಳಿಗೆ ಸಹಕಾರಿಯಾಗಲಿದೆ. ಇದನ್ನು ಪದವೀಧರ ಮತದಾರರು ಕೂಡ ಅರ್ಥ ಮಾಡಿಕೊಂಡಿದ್ದಾರೆ. ಹಾಗಾಗಿ ಗೆಲ್ಲುವ ವಿಶ್ವಾಸವಿದೆ ಎಂದು ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರ್ ಮಂಜುನಾಥ್ ಹೇಳಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಈ ವೇಳೆ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಾ.ಕೆ.ಕೆ. ಮಂಜುನಾಥ್ ಮಾತನಾಡಿ, ಶಿಕ್ಷಕರ ವೇತನವನ್ನು ಕಾಂಗ್ರೆಸ್ ಸರಕಾರವು 2018ರಲ್ಲೇ ಶೇ.30ರಲ್ಲಿ ಹೆಚ್ಚಿಸಿತ್ತು. ಬಿಜೆಪಿ ಮತ್ತು ಜೆಡಿಎಸ್ ಸರಕಾರವು ಶಿಕ್ಷಕರ ಪಿಂಚಣಿಯನ್ನು ಕಿತ್ತುಕೊಂಡಿವೆ. ಅನುದಾನಿತ ಶಿಕ್ಷಕರನ್ನು ಬೀದಿಪಾಲು ಮಾಡಿವೆ. ಇದನ್ನು ಶಿಕ್ಷಕರು ಎಂದಿಗೂ ಮರೆಯಲಾರರು ಎಂದರು.