ವಿಧಾನ ಪರಿಷತ್‌, ನೈರುತ್ಯ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ರಘುಪತಿ ಭಟ್ ಕಣಕ್ಕೆ-ಪಕ್ಷದಿಂದ ತಮಗಾದ ಅನ್ಯಾಯವನ್ನು ಮುಂದಿಟ್ಟು ಮತಯಾಚನೆ

ಮಂಗಳೂರು: ಜನಪ್ರತಿನಿಧಿಯಾಗಿ 2001ರಿಂದ 2018ರ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದು, ಜೂನ್ 3 ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ನನಗೆ ಮತ ಹಾಕಿ ಕೆಲಸ ಮಾಡಲು ಅವಕಾಶ ಕೊಡಿ‌ ಎಂದು ಮಾಜಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಪರಿಷತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ರಘುಪತಿ ಭಟ್ ಮಂಗಳೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಪದವೀಧರರ ಮತ ಯಾಚಿಸಿದರು. ಉಡುಪಿ 2004 ಕ್ಕೂ ಮೊದಲು ಹೇಗಿತ್ತು, ಈಗ ಹೇಗಿದೆ ಅನ್ನೋದೇ ನನ್ನ ಕೆಲಸಕ್ಕೆ ಸಾಕ್ಷಿ. 2004ರ ಪೂರ್ವ ಉಡುಪಿಯ ರಸ್ತೆಗಳಲ್ಲಿ ಎರಡು ಬಸ್ ಗಳು ಒಟ್ಟಿಗೆ ಪಾಸ್ ಆಗುವ ವ್ಯವಸ್ಥೆಯಿರಲಿಲ್ಲ. ವಿ ಎಸ್ ಆಚಾರ್ಯ ಮಾರ್ಗದರ್ಶನದಲ್ಲಿ ಚತುಷ್ಪತ ರಸ್ತೆ ಮೊದಲು ಆರಂಭ ಮಾಡಿದ್ದು ನಾನು. ಈ ಸಾಧನೆಯ ಆಧಾರದಲ್ಲಿ ಮತ ಯಾಚಿಸುತ್ತಿದ್ದೇನೆ. ನಾನು ಶಾಸಕನಾಗಿದ್ದಾಗ ಈ ಕೆಲಸಗಳಿಗೆ ಒತ್ತು ನೀಡಿದ್ದೇನೆ. ರಾಜ್ಯದ 224 ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಕಲೆಗೆ ಹೆಚ್ಚು ಪ್ರೋತ್ಸಾಹ ನೀಡಿದ ಕ್ಷೇತ್ರ ಉಡುಪಿ ಕ್ಷೇತ್ರವಾಗಿದೆ. 2023 ವಿಧಾನ ಸಭಾ ಚುನಾವಣೆಗೆ ನಾನೇ ಅಭ್ಯರ್ಥಿ ಎಂದು ಎಲ್ಲಾ ತಯಾರಿ ಮಾಡಿದ್ದೆ. ಆದರೆ ನನಗೆ ಟಿಕೆಟ್ ನಿರಾಕರಿಸಲಾಯಿತು. ಆದರೆ ನಾನು ಪಕ್ಷ ನಿಷ್ಠೆ ಮರೆಯಲಿಲ್ಲ. ಟಿಕೆಟ್ ನೀಡದೆ ನನ್ನನ್ನ ನಡೆಸಿಕೊಂಡ ರೀತಿ ನನಗೆ ಬೇಸರ ತರಿಸಿತ್ತು. ಆದರೂ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಸಾಕಷ್ಟು ಶ್ರಮ ವಹಿಸಿದ್ದೆ. ಇಧಾದ ಬಳಿಕವೂ ನಾನು ಬಿಜೆಪಿ ಪಕ್ಷದಲ್ಲಿದ್ದೆ. ಸಾಮಾಜಿಕ ನ್ಯಾಯಕ್ಕಾಗಿ ಯಶ್ಪಾಲ್ ಸುವರ್ಣಗೆ ಎಂ ಎಲ್ ಎ ಟಿಕೆಟ್ ಬಿಟ್ಟು ಕೊಡಿ ಎಂದು ಪಕ್ಷದ ಹಿರಿಯರು ಹೇಳಿದ್ದರು. ನಿಮ್ಮ ನೆಗಟಿವ್ ಇಲ್ಲ ಕೇವಲ ಸಾಮಾಜಿಕ ನ್ಯಾಯಕ್ಕಾಗಿ ಎಂದು ಹೇಳಿದ್ರು. ನೈರುತ್ಯ ಪದವೀಧರರ ಕ್ಷೇತ್ರದ ಸ್ಥಾನ ತೆರವಾದಾಗ ನನ್ನ ಪಕ್ಷದ ಹಿರಿಯರಲ್ಲಿ ಅವಕಾಶ ನೀಡಬೇಕು ಎಂದು ಹೇಳಿದ್ದೆ. ನನ್ನನ್ನು ರಾಜಕೀಯವಾಗಿ ಮುಗಿಸಲೇಬೇಕು ಎಂದಿದ್ದರೆ ನನಗೆ ನೈರುತ್ಯ ಪದವೀಧರ ಕ್ಷೇತ್ರದ ಸ್ಥಾನ ಕೊಡಬೇಡಿ ಎಂದಿದ್ದೆ. ನೀವೇ ಇದಕ್ಕೆ ಸೂಕ್ತ, ಈ ಬಾರಿ ನಿಮಗೆ ಅನ್ಯಾಯವಾಗಲ್ಲ ಅಂದಿದ್ರು. ಆದರೆ ಬೈ ಎಲೆಕ್ಷನ್ ನಡೆಯಲಿಲ್ಲ. ಆ ಬಳಿಕ ಪರಿಷತ್ ಚುನಾವಣೆಯಲ್ಲಿ ಕರಾವಳಿಗೆ ಭಾಗಕ್ಕೆ ಶಿಕ್ಷಕರ ಕ್ಷೇತ್ರ, ಮಲೆನಾಡಿಗೆ ಪಧವೀಧರ ಕ್ಷೇತ್ರ ನೀಡುತ್ತೇವೆ ಅಂದಿದ್ರು. ಮಾತ್ರವಲ್ಲ ನಿಮಗೆ ಅವಕಾಶ ನೀಡುತ್ತೇವೆ,ಕೆಲಸ ಶುರು ಮಾಡಿ ಎಂದು ಹೇಳಿದ್ದರು.

ಲೋಕಸಭೆ ಚುನಾವಣೆ ನಂತರ ಸ್ಥಾನ ಘೋಷಣೆ ಮಾಡ್ತೇವೆ ಅಂದ್ರು. ಧನಂಜಯ ಸರ್ಜಿಗೆ ಕೊಡಡಿದ್ರೆ ಲಿಂಗಾಯಿತ ಮತಗಳಿಗೆ ಹೊಡೆತ ಬೀಳುತ್ತೆ ಅಂದ್ರು. ನನ್ನನ್ನು ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದ ಪ್ರಭಾರಿ ಮಾಡಿದ್ರು. ಪರಿಷತ್ ಚುನಾವಣೆಗೆ ಸಹಕಾರ ಆಗ್ಲಿ ಎಂದು ಮಾಡಿದ್ದಾರೆ ಅಂದುಕೊಂಡೆ. ಕೊನೆಯ ಕ್ಷಣದವರೆಗೂ ನಾನು ಬಿಜೆಪಿಗೆ ಕಚೇರಿಗೆ ಅಲೆದಾಡಿದ್ದೆ. ಶಿಕ್ಷಕರಿಗೆ ಮೇಲೆ ಕೊಟ್ಟ ಬಳಿಕ ಪದವೀಧರ ಕರಾವಳಿಗೆ ಕೊಡುತ್ತಾರೆ ಅನ್ನೋ ಭರವಸೆ ಇತ್ತು. ಆದರೆ ನಾವು ಏನು ಮಾಡಿದ್ರು ಇಲ್ಲಿನ ಕಾರ್ಯಕರ್ತರು ಮತ ಹಾಕುತ್ತಾರೆ ಅನ್ನೋ ಭಾವನೆ ನಮ್ಮ ರಾಜ್ಯ ನಾಯಕರಿಗೆ ಬಂದಿದೆ. ಹಿಂದುತ್ವದ ಆಧಾರದಲ್ಲಿ ಏನೇ ಮಾಡಿದ್ರು ಇಲ್ಲಿ ನಡೆಯುತ್ತೆ ಅನ್ನೋ ಭಾವನೆಯಿದೆ. ಶಿವಮೊಗ್ಗಕ್ಕೆ ಕೊಡಬೇಕು ಅಂದುಕೊಂಡಿದ್ರೆ ಅಲ್ಲೂ ಹಿರಿಯರಿದ್ದರು. ಅವರಿಗೆ ಕೊಡುತ್ತಿದ್ದರೂ ನಮಗೆ ಬೇಸರವಾಗುತ್ತಿರಲಿಲ್ಲ ಎಂದು ತಮಗಾದ ನೋವನ್ನು ಹಂಚಿಕೊಂಡ ರಘುಪತಿ ಭಟ್, ಒಂದೂವರೆ ವರ್ಷದ ಹಿಂದೆ ಬಿಜೆಪಿ ಸೇರಿದ್ದ ಧನಂಜಯ ಸರ್ಜಿ. ಶಿವಮೊಗ್ಗದಲ್ಲಿ ಹರ್ಷ ಕೊಲೆಯಾದಾಗ, ಸರ್ಜಿ ಫೌಂಡೇಶನ್ ವತಿಯಿಂದ ನಡೆದ ಶಾಂತಿಗಾಗಿ ನಡಿಗೆ ಕಾರ್ಯಕ್ರಮ ನಡೆದಾಗ ಅದರಲ್ಲಿ ಕಮ್ಯುನಿಸ್ಟ್ ಹಾಗೂ ಸಂಘ ಪರಿವಾರದ ವಿರುದ್ಧ ಕೆಲಸ ಮಾಡಿದವರು ಭಾಗವಹಿಸಿದ್ದರು. ಆಗ ಧನಂಜಯ ಸರ್ಜಿ ಕಾಂಗ್ರೆಸ್ ಟಿಕೆಟ್ ಗಾಗಿ ಈ ತಯಾರಿ ನಡೆಸಿದ್ದರು ಎಂದು ಹೇಳಿದರು.

ಈಗೆಲ್ಲ ಜಾತಿ ಮೇಲೆ ಚುನಾವಣೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮಂತಹ ಸಣ್ಣ ಜಾತಿಗೆ ರಾಜಕೀಯ ಮಾಡೋದು ಬಹಳ ಕಷ್ಟವಿದೆ. ನನ್ನ ನೈತಿಕತೆಯಿಂದ ನಾನು ಪಕ್ಷದ ವಿರುದ್ಧ ಹೋಗಿದ್ದೇನೆ ಎಂದು ನನಗೆ ಅನಿಸಲ್ಲ. ನಾನು ಗೆದ್ರೂ ಬಿಜೆಪಿ, ಗೆದ್ದ ಮೇಲೂ ನಾನು ಬಿಜೆಪಿ ಕಚೇರಿಗೆ ಹೋಗುತ್ತೇನೆ. ಸೋತರೂ ನನ್ನನ್ನು ಉಚ್ಚಾಟನೆ ಮಾಡಿದ್ರೂ,ನಾನು ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಇದು ಸರಕಾರ ರಚಿಸುವ ಚುನಾವಣೆಯಲ್ಲ. ಯಾರನ್ನೂ ಸೋಲಿಸಲು ನಾನು ಸ್ಪರ್ಧಿಸುತ್ತಿಲ್ಲ. ಶಾಸಕನಾಗಿ ಯಾವ ರೀತಿ ಕೆಲಸ ಮಾಡಿದ್ದೇನೆ ಅದೇ ರೀತಿ ಇಲ್ಲೂ ಗೆದ್ದು ಕೆಲಸ ಮಾಡುತ್ತೇನೆ. ವಿಧಾನ ಸಭೆಯಲ್ಲಿ 4 ಕ್ಷೇತ್ರದ ಅಭ್ಯರ್ಥಿ ಬದಲಾವಣೆ ಮಾಡಿದ್ರು. ಆದರೂ ನಾವು ಪಕ್ಷಕ್ಕೋಸ್ಕರ ದುಡಿದಿದ್ದೇವೆ, ಅಭ್ಯರ್ಥಿಗಳನ್ನ ಗೆಲ್ಲಿಸಿ ತಂದಿದ್ದೇವೆ. ಎರಡೆರಡು ಚುನಾವಣೆಯಲ್ಲಿ ಸೀಟ್ ನಿರಾಕರಿಸಿದಾಗ ಪಕ್ಷದ ಪರವಾಗಿ ಕೆಲಸ ಮಾಡಿದ್ದು ನಾನೊಬ್ಬನೇ. ಮೊನ್ನೆ ಟಿಕೇಟ್ ಘೋಷಣೆಯಾಗುವವರೆಗೂ ಜೀವ ಬಿಟ್ಟು ಕೆಲಸ ಮಾಡಿದ್ದೇನೆ‌ ಎಂದು ಹೇಳಿದರು.

ನಮ್ಮ ಪಕ್ಷದಲ್ಲಿ ಮುಂಚೆ ಬೂತ್ ಮಟ್ಟದಲ್ಲಿ ಹೆಸರು ಚರ್ಚೆಯಾಗಿ ಹೋಗುತ್ತಿತ್ತು. ಆದರೆ ಈಗ ಗಾಡ್ ಫಾದರ್ ಸಂಸ್ಕೃತಿ ಬಿಜೆಪಿ ಗೆ ಬಂದಿದೆ. ಕಾಂಗ್ರೆಸ್ ನ ಗಾಡ್ ಫಾದರ್ ಸಂಸ್ಕೃತಿ ಬಿಜೆಪಿಗೂ ಬಂದಿದೆ. ನಾನು ಲೀಡರ್ ಗಳನ್ನ ಹಿಡಿದುಕೊಂಡಿರಲಿಲ್ಲ, ನಾನು ಕಾರ್ಯಕರ್ತರನ್ನ ಹಿಡಿದುಕೊಂಡಿದ್ದೇನೆ. ನನ್ನ ಜಾತಕ ಸರಿ ಇಲ್ವಾ,? ಆ ಕಾರಣದಿಂದ ನನಗೆ ಟಿಕೆಟ್ ಸಿಗ್ತಾ ಇಲ್ವಾ ಗೊತ್ತಿಲ್ಲ. ಈಶ್ವರಪ್ಪ ನವರ ಕಥೆ ಬೇರೆ ನನ್ನ ಕಥೆ ಬೇರೆ. ಪಕ್ಷದಿಂದ ಉಚ್ಚಾಟನೆ ಮಾಡಿದ್ರೆ ನನಗೆ ಬೇಸರವಾಗುತ್ತೆ. ಆದರೆ ಕಾರ್ಯಕರ್ತರ ಪರವಾಗಿ ಧ್ವನಿ ಎತ್ತಬೇಕಾಗಿದೆ. ಗೆಲ್ಲಲಿ, ಸೋಲಲಿ ನಾನು ಇಟ್ಟ ಹೆಜ್ಜೆ ಹಿಂದೆ ಇಡೋದಿಲ್ಲ. ಒಟ್ಟಾರೆ ಕರಾವಳಿಯವರು ಹೇಗೂ ವೋಟ್ ಹಾಕ್ತಾರೆ ಎಂದು ನಿರ್ಲಕ್ಷ್ಯ ಮಾಡೋದಲ್ಲ. ಉಚ್ಚಾಟನೆಯಾದರೆ ನಾನು ಕಾರ್ಯಕರ್ತನಾಗಿರುತ್ತೇನೆ. ಮೇ 20ರ ನಂತರ ಶೋಕಾಸ್ ನೋಟಿಸ್ ಬರಬಹುದು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here