ಉತ್ತರ ಕರ್ನಾಟಕ ಭಾಗದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಾಸ್ ಕಾಪಿ‌ ಆಗ್ತಾ ಇತ್ತು-ಎಸ್.ಎಲ್.ಭೋಜೇಗೌಡ

ಮಂಗಳೂರು: ಈ ಹಿಂದೆ ಉತ್ತರ ಕರ್ನಾಟಕ ಭಾಗದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಾಸ್ ಕಾಪಿ‌ ಆಗ್ತಾ ಇತ್ತು ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಪರೋಕ್ಷವಾಗಿ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ, ನೈರುತ್ಯ ಕ್ಷೇತ್ರಗಳಿಗೆ ಪರೀಕ್ಷೆ ಸಮಯ ಅನ್ಯಾಯ ಆಗ್ತಿದೆ ಎಂದು ವಿಧಾನ ಪರಿಷತ್‌ನಲ್ಲಿ ಹೇಳಿದ್ದೆ. ಪರೀಕ್ಷೆ ವೇಳೆ ಸಿಸಿಟಿವಿ ಅಳವಡಿಕೆ ಬಗ್ಗೆ ನಾನು ಪರಿಷತ್ ನಲ್ಲಿ ಆಗ್ರಹಿಸಿದ್ದೆ. ಆಗ ಆ ಭಾಗದಲ್ಲಿ ಮಾಸ್ ಕಾಪಿ‌ ಆಗ್ತಾ ಇತ್ತು. ಅದನ್ನು ತಡೆದು ಮಾಸ್ ಕಾಪಿ ನಿಲ್ಲಿಸಲು‌ ಕ್ಯಾಮರಾ ಹಾಕಲು ಹೇಳಿದ್ದೆ. ನಿಜವಾದ ಶಿಕ್ಷಣ ಸಿಗಬೇಕು ಎಂದು ಪರಿಷತ್ ನಲ್ಲಿ‌ ಆಗ್ರಹಿಸಿದ್ದೆ. ಬಹಳ ಹಿಂದಿನಿಂದಲೂ ಅನ್ಯಾಯ ಆಗ್ತಾ ಇದೆ ಅಂತ ಹೋರಾಟ ಮಾಡಿದ್ದೆ. ಅದರ ಪರಿಣಾಮ ಈ ಬಾರಿ‌ ಪರೀಕ್ಷೆಯಲ್ಲಿ ಸಿಸಿಟಿವಿ ಹಾಕಿದ್ದಾರೆ. ಹೀಗಾಗಿ ಈ ಬಾರಿ ಸರಿಯಾಗಿ ಪರೀಕ್ಷೆ ನಡೆದು ಫಲಿತಾಂಶ ಬಂದಿದೆ. ಈಗ ನಾವು ಮತ್ತೆ ಅದರ ಬಗ್ಗೆ ಧ್ವನಿ ಎತ್ತ ಬೇಕಿದೆ. ಈ ಹಿಂದಿನ ಅನಾಹುತದ ತಪ್ಪಿತಸ್ಥರ ಮೇಲೆ ಕ್ರಮ ಆಗಬೇಕು. ಈಗಿನ ರಿಸಲ್ಟ್ ನೋಡಿಯಾದ್ರೂ ಹಿಂದಿನ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಈ ಬಗ್ಗೆ ನಾನು ಮುಂದೆ ಪರಿಷತ್ ನಲ್ಲಿ ಆಗ್ರಹ‌ ಮಾಡ್ತೇನೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here