ಮಂಗಳೂರು: ನೈರುತ್ಯ ಶಿಕ್ಷಕ, ಪದವೀಧರ ಚುನಾವಣೆಯಲ್ಲಿ ಆಯನೂರು ಮಂಜುನಾಥ್ ಮತ್ತು ಕೆಕೆ ಮಂಜುನಾಥ್ ಸ್ಪರ್ಧೆಯಲ್ಲಿದ್ದಾರೆ. ಕಾಂಗ್ರೆಸ್ ಸರ್ಕಾರ ಅರಸು ಕಾಲದಿಂದ ಶಿಕ್ಷಕರಿಗೆ, ಪದವೀಧರರಿಗೆ ನೂರಾರು ಸೌಲಭ್ಯ ನೀಡಿದೆ. ಕೆಲಸ ಮಾಡಿದ್ದಕ್ಕೆ ಕೂಲಿ ಕೊಡಿ. ನಾವು ಕೆಲಸ ಮಾಡಿದ್ದೇವೆ. ನೂರಾರು ಕೆಲಸ, ಕಲ್ಯಾಣ ಕಾರ್ಯಗಳು ಆಗಿವೆ. ಈಗ ಋಣ ತೀರಿಸುವ ಕೆಲಸ ಮಾಡಬೇಕು ಎಂದು ಕೆಪಿಸಿಸಿ ಪದವೀಧರ ಘಟಕದ ರಾಜ್ಯಾಧ್ಯಕ್ಷ ಡಾ. ಕುಬೇರಪ್ಪ ಹೇಳಿದ್ದಾರೆ.
ಸಿಎಂ ಹಿಂದಿನ ಬಾರಿ 6ನೇ ವೇತನ ಆಯೋಗ ಯಥಾವತ್ ಜಾರಿ ಮಾಡಿದ್ದರಿಂದ 10-25 ಸಾವಿರ ಲಾಭ ಆಯ್ತು. ಇದು ದೊಡ್ಡ ಕೊಡುಗೆ. ಈಗ 7ನೇ ವೇತನ ಆಯೋಗ ಮಧ್ಯಂತರ ವರದಿ ನೀಡಿದೆ. ಚುನಾವಣೆ ಮುಗಿದ ನಂತರ ಯಥಾವತ್ ಜಾರಿ ಇಚ್ಚೆ ಸಿಎಂ ವ್ಯಕ್ತಪಡಿಸಿದ್ದಾರೆ. ಇದರಿಂದ ದೊಡ್ಡ ಲಾಭ ಆಗಲಿದೆ ಎಂದರು. ಅನುದಾನಿತ ಪ.ಪೂ ಕಾಲೇಜು ಹುದ್ದೆ ಖಾಲಿ ಇತ್ತು. ಮುಖ್ಯಮಂತ್ರಿ ಕಳೆದ ಬಾರಿ 2015ರವರೆಗಿನ ಎಲ್ಲಾ ಹುದ್ದೆ ಭರ್ತಿಗೆ ಆದೇಶ ನೀಡಿದರು. ವಯೋಮಿತಿ ಕೂಡ ಹೆಚ್ಚಿಸಿದರು. ಇದರಿಂದ ಹಲವು ಸಾವಿರ ಮಂದಿಗೆ ಉದ್ಯೋಗ ದೊರೆಯಿತು. ಗ್ಯಾರಂಟಿ ಮೂಲಕ ನಿರುದ್ಯೋಗಿ ಪದವೀಧರರಿಗೆ ಗೌರವದ ಸ್ಥಾನ ನೀಡಿದೆ. ಕೈ ಸರ್ಕಾರ ಮಾನವೀಯತೆಯಿಂದ ಸ್ಪಂದಿಸಿದೆ. ಅತಿಥಿ ಉಪನ್ಯಾಸಕರಿಗೆ ಅಭದ್ರತೆ ಇತ್ತು. ಆದೇಶ ಆಗಿದೆ- ಮುಂದುವರಿಸುವ ಆದೇಶ ಆಗಿದೆ 12 ಸಿಎಲ್, ಪ್ರತಿವರ್ಷ ಇನ್ ಕ್ರಿಮೆಂಟ್, ಹೆರಿಗೆ ರಜೆ, 25-50 ಲಕ್ಷ ಆರೋಗ್ಯವಿಮೆ, ಮನೆಗೆ ಹೋಗುವಾಗ 5 ಲಕ್ಷ ಇಡುಗಂಟು ನೀಡೋ ಆದೇಶ. 18ರಿಂದ 32-40 ಸಾವಿರ ವೇತನ ನೀಡ್ತಿದೇವೆ. ಅನುದಾನ ರಹಿತ ಶಾಲೆ ಕಾಲೇಜುಗಳನ್ನು ಹಂತ ಹಂತವಾಗಿ ಅನುದಾನಕ್ಕೆ ಒಳಪಡಿಸ್ತೇವೆ, 40-50 ಸಾವಿರ ಸೌಕರರಿಗೆ ಸರ್ಕಾರ ಸಂಬಳ ನೀಡಲಿದೆ.
ಹಳೆ ಪಿಂಚಣಿ ಸರ್ಕಾರ ತಂದದ್ದು ಬಿಜೆಪಿ ಸರ್ಕಾರ. ಯಾವ ಮುಖ ಇಟ್ಕೊಂಡು ಬಿಜೆಪಿಯವರು ಓಟು ಕೇಳ್ತಾರೆ? ಹಳೆ ಪಿಂಚಣಿ ಹಿಮಾಚಲ ಪ್ರದೇಶದಲ್ಲಿ ಜಾರಿ ಆಗಿದೆ. ರಾಜ್ಯದಲ್ಲೂ ಸಮಿತಿ ರಚಿಸಲಾಗಿದೆ. ಅದು ವರದಿ ನೀಡಿದ ಕೂಡಲೆ ಹಳೆ ಪಿಂಚಣಿ ಯೋಜನೆ ರಾಜ್ಯದಲ್ಲಿ ಜಾರಿ ಆಗಲಿದೆ. ನಾವೇನು ಕೆಲಸ ಮಾಡಿದ್ದೇವೆ, ಬಿಜೆಪಿಯವರು ಏನು ಕೆಲಸ ಮಾಡಿದ್ದಾರೆ ತುಲನೆ ಮಾಡಿ. ನಮಗೆ ಪಗಾರ(ಸಂಬಳ) ನೀಡಿ ಎಂದರು. ಪತ್ರಿಕಾಗೋಷ್ಠಿಯಲ್ಲಿ ನೀರಜ್ ಪಾಲ್, ಶುಭೋದಯ ಆಳ್ವ, ಅಲಿಸ್ಟರ್, ಹಾವೇರಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಂಕರ್ ಉಪಸ್ಥಿತರಿದ್ದರು.