ಪಶ್ಚಿಮ ಬಂಗಾಳದ ಕಡಲತೀರಕ್ಕೆ ಅಪ್ಪಳಿಸಿದ ರೆಮಲ್ ಚಂಡಮಾರುತ-ಹಲವೆಡೆ ಭೂಕುಸಿತ

ಮಂಗಳೂರು(ಪಶ್ಚಿಮ ಬಂಗಾಳ): ರೆಮಲ್ ಚಂಡಮಾರುತವು ಪಶ್ಚಿಮ ಬಂಗಾಳದ ಕರಾವಳಿಗೆ ಅಪ್ಪಳಿಸಿದ್ದು, ಎಲ್ಲೆಡೆ ಭೂಕುಸಿತ ಸಂಭವಿಸಿದೆ. ಬಿಹಾರದ ಮೇಲೂ ಚಂಡಮಾರುತದ ಪರಿಣಾಮ ಗೋಚರಿಸಲಿದೆ ಎನ್ನಲಾಗಿದೆ. ಬಂಗಾಳದಲ್ಲಿ ರೆಮಲ್ ಚಂಡಮಾರುತದ ಪ್ರಭಾವದ ಹಿನ್ನೆಲೆಯಲ್ಲಿ ಕೋಲ್ಕತ್ತಾ-ಪಾಟ್ನಾ ನಡುವೆ ಹಾರಾಟ ನಡೆಸುತ್ತಿದ್ದ ಎರಡು ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, 700ಕ್ಕೂ ಹೆಚ್ಚು ಪ್ರಯಾಣಿಕರು ತೊಂದರೆ ಅನುಭವಿಸಿದರು.

ಹವಾಮಾನ ಇಲಾಖೆಯು ಪಶ್ಚಿಮ ಬಂಗಾಳ ಮತ್ತು ಒಡಿಶಾ ಹೊರತುಪಡಿಸಿ ಬಹುತೇಕ ಎಲ್ಲಾ ಈಶಾನ್ಯ ರಾಜ್ಯಗಳಲ್ಲಿ ಬಲವಾದ ಗಾಳಿಯೊಂದಿಗೆ ಮಳೆಯಾಗುತ್ತಿದೆ. ಚಂಡಮಾರುತದ ಪ್ರಭಾವ ಈ ರಾಜ್ಯಗಳಲ್ಲಿ ಒಂದೆರಡು ದಿನ ಇರಬಹುದು ಎನ್ನಲಾಗಿದೆ. ಸೋಮವಾರ ಹಾಗೂ ಮಂಗಳವಾರ ಅಸ್ಸಾಂ, ಮೇಘಾಲಯ, ಮಣಿಪುರ, ನಾಗಾಲ್ಯಾಂಡ್, ಅರುಣಾಚಲಪ್ರದೇಶ ಹಾಗೂ ತ್ರಿಪುರಾದಲ್ಲಿ ಭಾರಿ ಮಳೆಯ ನಿರೀಕ್ಷೆ ಇದೆ. ಚಂಡಮಾರುತದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಸೂಕ್ಷ್ಮ ಪ್ರದೇಶಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಹಾಗೆಯೇ ಅಪಾಯದ ಭೀತಿ ನಡುವೆ ಬಾಂಗ್ಲಾದೇಶದ ಸೂಕ್ಷ್ಮ ಪ್ರದೇಶಗಳಿಂದ ಎಂಟು ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಭಾರತೀಯ ರೈಲ್ವೆಯು ಈ ಪ್ರದೇಶದಲ್ಲಿ ಅನೇಕ ರೈಲುಗಳನ್ನು ರದ್ದುಗೊಳಿಸಿದೆ. ಪಶ್ಚಿಮ ಬಂಗಾಳದ ಶಾಲಿಮಾರ ರೇಲ್ವೆ ನಿಲ್ದಾಣದಲ್ಲಿ, ಭಾರಿ ಬಿರುಗಾಳಿ ಮತ್ತು ಹಳಿ ಕುಸಿತದಿಂದ ಅನಾಹುತ ಆಗಬಾರದು ಎಂದು ರೈಲ್ವೇ ಹಳಿಗೆ ದೊಡ್ಡ ಕಬ್ಬಿಣದ ಸರಳು ಕಟ್ಟಲಾಗಿದೆ.

LEAVE A REPLY

Please enter your comment!
Please enter your name here