ಶತಾಯುಷಿಗಳಿಬ್ಬರ ಲವ್-ವೃದ್ಧಾಶ್ರಮದಲ್ಲೇ ಜೋಡಿಯಾದ ಪ್ರೇಮಿಗಳು

ಮಂಗಳೂರು(ಅಮೇರಿಕಾ): ಪ್ರೀತಿ ಕುರುಡು ಎಂಬ ಮಾತನ್ನು ಪುಷ್ಠೀಕರಿಸುವಂತೆ ಅಮೇರಿಕಾದ ವೃದ್ಧರಿಬ್ಬರು ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗುವ ಮೂಲಕ ಇಳಿ ವಯಸ್ಸಿನಲ್ಲಿ ನವ ಜೀವನಕ್ಕೆ ಕಾಲಿಟ್ಟಿದ್ದು, ಮದುವೆಯ ವಿಡಿಯೋ ವೈರಲ್‌ ಆಗಿದೆ.

ಅಮೇರಿಕಾದ ಪೆನ್ಸಿಲ್ವೇನಿಯಾದಲ್ಲಿ ನಡೆದಿದ್ದು, ಕಳೆದ 9 ವರ್ಷದಿಂದ ಪರಸ್ಪರ ಮಾರ್ಜೋರಿ ಮತ್ತು ಬರ್ನಿ ಲಿಟ್‌ಮ್ಯಾನ್‌ ಒಂದೇ ವೃದ್ಧಾಶ್ರಮದಲ್ಲಿ ವಾಸಿಸುತ್ತಿದ್ದು, ಡೇಟಿಂಗ್‌ ಮಾಡುತ್ತಿದ್ದರು. ಇದೀಗ ಈ ಹಿರಿ ಜೋಡಿ ಕುಟುಂಬಸ್ಥರ ಸಮ್ಮುಖದಲ್ಲಿ ವೃದ್ಧಾಶ್ರಮದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. “ತನ್ನ ಅಜ್ಜ ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸಿದಾಗ ನಮಗೆಲ್ಲರಿಗೂ ಆಶ್ಚರ್ಯವಾಯಿತು ಜೊತೆಜೊತೆಗೆ ತುಂಬಾ ಖುಷಿಯೂ ಆಯಿತು” ಎಂದು ಲಿಟ್‌ಮ್ಯಾನ್‌ ಮೊಮ್ಮಗಳು ಸಾರಾ ಲಿಟ್‌ಮನ್‌ ಹೇಳಿದ್ದಾರೆ. ಮಾರ್ಜೋರಿ ಮತ್ತು ಬರ್ನಿ ಲಿಟ್‌ಮನ್‌ ಇವರಿಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಕುಟುಂಬಸ್ಥರೆಲ್ಲರೂ ಸೇರಿ ಮೇ 19 ರಂದು ಕಾನೂನುಬದ್ಧವಾಗಿ ಹಿರಿ ಜೋಡಿಗೆ ಅದ್ಧೂರಿಯಾಗಿ ಮದುವೆ ಮಾಡಿದ್ದಾರೆ. ಈ ಕುರಿತ ಪೋಸ್ಟನ್ನು ಇನ್‌ಸ್ಟಾಗ್ರಾಮ್‌ ಪೇಜ್‌ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರು ನವ ಜೋಡಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here