ಜಾಗ್ರತೆ…ಜಾಗ್ರತೆ…ಜಾಗ್ರತೆ…ಕ್ಲಿಕ್ ಮಾಡಿದರೆ ಎಪಿಕೆ ಆ್ಯಪ್‌-ಆಗುವುದು ನಿಮ್ಮ ಬ್ಯಾಂಕ್‌ ಅಕೌಂಟ್ ಸಾಫ್

ಬ್ಯಾಂಕ್‌ ಹೆಸರಲ್ಲೋ, ಲೋನ್ ಅಗತ್ಯವಿದೆಯೋ ಎಂದು ಕೇಳಿ ನಿಮ್ಮನ್ನು ಫೋನ್ ಮೂಲಕ ಹ್ಯಾಕರ್‌ಗಳು ಸಂಪರ್ಕಿಸಬಹುದು… ಇಲ್ಲವೇ ಭರ್ಜರಿ ಗಿಫ್ಟ್‌ ಬಂದಿದೆ ಎಂದು ಒಂದು ಲಿಂಕ್ ಕಳಿಸಿ ನಿಮ್ಮನ್ನು ಮೋಸ ಮಾಡಬಹುದು. ಒಂದು ಎಪಿಕೆ ಎಕ್ಸ್‌ಟೆಂಕ್ಷನ್ ಇರುವ ಲಿಂಕ್ ಬಂದರೆ ಅಪಾಯ ಕಟ್ಟಿಟ್ಟ ಬುತ್ತಿ. ಎಚ್ಚರ ತಪ್ಪಿಯೋ, ಕುತೂಹಲಕ್ಕೋ ಆ ಲಿಂಕ್ ಕ್ಲಿಕ್ ಮಾಡಿದರೆ ದೂರದಲ್ಲಿ ಕಾದು ಕುಳಿತಿರುವ ಹ್ಯಾಕರ್‌ಗಳು ನಿಮ್ಮ ಫೋನ್‌ನ್ನು ತಮ್ಮ ನಿಯಂತ್ರಣಕ್ಕೆ ಪಡೆದುಕೊಳ್ಳುತ್ತಾರೆ.  ಸೈಬರ್ ವಂಚಕರು ನಿಮ್ಮ ಫೋನ್‌ನೊಳಕ್ಕೆ ನುಗ್ಗಿ ಲಿಂಕ್ ಆಗಿರುವ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ ಕ್ಷಣಾರ್ಧದಲ್ಲಿ ನಿಮ್ಮ ಖಾತೆಯಲ್ಲಿರುವ ಅಷ್ಟೂ ಹಣವನ್ನು ವರ್ಗಾಯಿಸಿಕೊಳ್ಳುತ್ತಾರೆ. ತಕ್ಷಣ ಅದು ನಿಮ್ಮ ಅರಿವಿಗೆ ಬಂದರೂ ನಿಮಗೆ ಏನೂ ಮಾಡಲಾಗದು. ಇಂತಹ ಸಂದರ್ಭದಲ್ಲಿ ನೀವು ಏನು ಮಾಡಬೇಕು..? ಇಲ್ಲಿದೆ ಒಂದು ಮಹತ್ವದ ಟಿಪ್ಸ್…

ನಿಮ್ಮ ಮೊಬೈಲ್‌ಗೆ ಒಂದು ಲಿಂಕ್ ಬರುತ್ತದೆ. ಸೈಬರ್ ವಂಚಕರು ನಿಮ್ಮ ಮೊಬೈಲ್ ಹ್ಯಾಕ್ ಮಾಡಲು ರ‍್ಯಾಟ್ ಸಿಸ್ಟಮ್ ಬಳಸುತ್ತಾರೆ. ರ‍್ಯಾಟ್ ಅಂದರೆ ರಿಮೋಟ್ ಆಕ್ಸಿಸ್ ಟೂಲ್ಸ್(RAT) ತಂತ್ರಜ್ಙಾನ. ಆಂಡ್ರಾಯ್ಡ್ ಆ್ಯಪ್‌ ಸಿದ್ದಪಡಿಸಿ ವಾಟ್ಸ್‌ಆ್ಯಪ್‌ ಮೂಲಕ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ಗೆ ಎಪಿಕೆ ಫೈಲ್ ಕಳುಹಿಸಿಕೊಡುತ್ತಾರೆ. ಇದನ್ನು ಯಾರಾದರೂ ಓಪನ್ ಮಾಡಿದರೆ, ಆ ಕೂಡಲೇ ಅವರ ಮೊಬೈಲ್ ಅವರ ನಿಯಂತ್ರಣಕ್ಕೆ ಬರುತ್ತದೆ. ಒಂದು ವೇಳೆ ಅಚಾನಕ್ ಆಗಿ ವಂಚಕರು ಕಳುಹಿಸಿದ ಎಪಿಕೆ ಫೈಲ್ ಕ್ಲಿಕ್ ಮಾಡಿದರೆ ತಕ್ಷಣ ನೀವು ನಿಮ್ಮ ಮೊಬೈಲ್‌ನ್ನು ಏರೋಪ್ಲೇನ್ ಮೋಡ್‌ಗೆ ಹಾಕಿಬಿಡಬೇಕು.. ಇಲ್ಲವೇ ಮೊಬೈಲ್ ಸ್ವಿಚ್ ಆಫ್ ಮಾಡಬೇಕು. ಇದಾದ ಕೂಡಲೇ ನಿಮ್ಮ ಬ್ಯಾಂಕ್‌ನ್ನು ಸಂಪರ್ಕಿಸಿ ಬ್ಯಾಂಕ್ ಖಾತೆಯನ್ನು ತಕ್ಷಣಕ್ಕೆ ಸ್ಥಗಿತಗೊಳಿಸುವಂತೆ ಮನವಿ ಮಾಡಬೇಕು. ಹೀಗೆ ಮಾಡಿದ್ದಲ್ಲಿ ಮಾತ್ರ ನಿಮ್ಮ ಬ್ಯಾಂಕ್ ಖಾತೆ ಸದ್ಯದ ಮಟ್ಟಿಗೆ ಸೇಫ್ ಆಗಲಿದೆ. ಮತ್ತು ನಿಮ್ಮ ಖಾತೆಯಲ್ಲಿ ಇರುವ ಹಣವನ್ನೂ ನೀವು ಹ್ಯಾಕರ್‌ಗಳ ಪಾಲಾಗದಂತೆ ಕಾಪಾಡಿಕೊಳ್ಳಬಹುದು..

ವಂಚಕರು ವಾಟ್ಸಾಪ್ ನಲ್ಲಿ ಕಳುಹಿಸಿದ ಎಪಿಕೆ ಫೈಲ್ ಮೆಸೇಜ್ ಅನ್ನು ಓಪನ್ ಮಾಡಿದಲ್ಲಿ ನಮ್ಮ ಮೊಬೈಲ್ ಗೆ ಬರುವ ಎಲ್ಲಾ ಮೆಸೇಜ್ ಗಳು ವಂಚಕರ ಮೊಬೈಲ್ ಗಳಿಗೆ ತಾನಾಗಿಯೇ ಹೋಗುತ್ತವೆ. ಆ ಮೂಲಕ ವಂಚಕರು ನಮ್ಮ ಮೊಬೈಲ್ ನಂಬರ್ ಗೆ ಬರುವ ಒಟಿಪಿ ಪಡೆದುಕೊಂಡು ಬ್ಯಾಂಕ್ ಖಾತೆಗಳಿಗೆ ಇಂಟರ್ ನೆಟ್ ಮೊಬೈಲ್ ಬ್ಯಾಂಕಿಗ್ ಸೌಲಭ್ಯಗಳನ್ನು ಅಳವಡಿಸಿಕೊಳ್ಳುತ್ತಾರೆ. ಆ ಬಳಿಕ ನಮ್ಮ ಖಾತೆಯಲ್ಲಿನ ಸಂಪೂರ್ಣ ಹಣವು ಕ್ಷಣ ಮಾತ್ರದಲ್ಲಿ ಅವರ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸುತ್ತಾರೆ.

ವಂಚನೆಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳಲು ಕೆಲ ಮಾರ್ಗ ಸೂಚಿಗಳು ಇಲ್ಲಿದೆ.

  • ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗಳಿಗೆ ವಾಟ್ಸಾಪ್ ಅಥವಾ ಮೊಬೈಲ್ ನಂಬರ್ ಗೆ ಬರುವ ಸಂದೇಶದ ಮುಖಾಂತರ ಬರುವ ಎಪಿಕೆ ಫೈಲ್ ಅಥವಾ ಆಂಡ್ರಾಯ್ಡ್ ಆಪ್ ಗಳ ಲಿಂಕ್ ಗಳನ್ನು ಕ್ಲಿಕ್ ಮಾಡಬೇಡಿ.
  • ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಇಸ್ಟಾಲ್ ಅನೋನ್ ಆಪ್ಸ್ ನ್ನು ಡಿಸೇಬಲ್ ಮಾಡಿ.
  • ತಿಳಿಯದೆ ಲಿಂಕ್ ಗಳನ್ನು ಕ್ಲಿಕ್ ಮಾಡಿದಲ್ಲಿ ತಕ್ಷಣ ತಮ್ಮ ಮೊಬೈಲ್ ಅನ್ನು ಎರೋಪ್ಲೇನ್ ಮೋಡ್ ಗೆ ಹಾಕಿ ಅಥವಾ ಸ್ವಿಚ್ ಆಫ್ ಮಾಡಿ.
  • ಬಳಿಕ ನಿಮ್ಮ ಬ್ಯಾಂಕನ್ನು ಸಂಪರ್ಕಿಸಿ ಖಾತೆಯನ್ನು ಸ್ಥಗಿತಗೊಳಿಸಿ.
  • ನಿಮ್ಮ ಖಾತೆಯಿಂದ ಹಣವು ವರ್ಗಾವಣೆಗೊಂಡಿದ್ದಲ್ಲಿ ಸೈಬರ್ ಕ್ರೈಮ್ ಸಹಾಯವಾಣಿ 1930ಗೆ ಕರೆ ಮಾಡಿ ದೂರು ದಾಖಲಿಸಿ.

 

 

LEAVE A REPLY

Please enter your comment!
Please enter your name here