ಮಂಗಳೂರು: ಶಾಸಕರ ಮನೆಗೆ ಮೊದಲು ಮೂರೇ ಜನ ಪೊಲೀಸರನ್ನು ಕಳುಹಿಸಿದ್ವಿ. ಅವರನ್ನು ವಿಚಾರಣೆಗೆ ಬರಲು ನೋಟೀಸ್ ನೀಡಲು ಹೋಗಲಾಗಿತ್ತು ಎಂದು ದ.ಕ ಎಸ್ ಪಿ ರಿಷ್ಯಂತ್ ಸಿ ಬಿ ತಿಳಿಸಿದ್ದಾರೆ. ಶಾಸಕ ಹರೀಶ್ ಪೂಂಜಾ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ, ಮನೆಯಲ್ಲಿ ನಡೆದ ಹೈಡ್ರಾಮದ ಬಗ್ಗೆ ಎಸ್ಪಿ ರಿಷ್ಯಂತ್ ಅವರು ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹರೀಶ್ ಪೂಂಜಾರ ಮನೆಯಲ್ಲಿ ಜನರು ಸೇರುವುದನ್ನು ನೋಡಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಯಿತು. ಹಾಗಂತ ಪೊಲೀಸರು ಅಲ್ಲಿಂದ ಓಡಿ ಹೋಗಿದ್ದಲ್ಲ. ಜನಪ್ರತಿನಿಧಿಗಳ ಮನವಿಯ ಹಿನ್ನಲೆಯಲ್ಲಿ ಪೊಲೀಸರು ವಾಪಾಸ್ ಬಂದಿದ್ದಾರೆ. ಶಾಸಕರ ಒಂದು ಕೇಸ್ ಗೆ ಸ್ಟೇಷನ್ ಬೇಲ್ ನೀಡಲಾಗಿದೆ. ಠಾಣೆಯಲ್ಲಿ ಶಾಸಕರ ಜೊತೆಗಿದ್ದವರೆಲ್ಲರೂ ಆರೋಪಿಗಳಾಗ್ತಾರೆ ಎಂದು ತಿಳಿಸಿದ್ದಾರೆ.