ಮಂಗಳೂರು(ಕನ್ಯಾಕುಮಾರಿ): ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಪ್ರಧಾನಿ ಮೋದಿ 45 ಗಂಟೆಗಳ ಕಾಲ ಧ್ಯಾನ ಮಾಡಲಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ನಿನ್ನೆ ಕನ್ಯಾಕುಮಾರಿ ತಲುಪಿರುವ ಮೋದಿ ಭಗವತಿ ಅಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ದೋಣಿ ಮೂಲಕ ರಾಕ್ ಸ್ಮಾರಕ ತಲುಪಿದ್ದಾರೆ. ಧೋತಿ ಮತ್ತು ಬಿಳಿ ಶಾಲು ಧರಿಸಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಧ್ಯಾನ ಮಂಟಪದಲ್ಲಿ ಧ್ಯಾನ ಮಾಡಲು ಪ್ರಾರಂಭಿಸಿದ್ದಾರೆ. ಧ್ಯಾನಕ್ಕೆ ಕೂತಿರೋ ಮೋದಿ ಜೂನ್ 1ರವರೆಗೂ ಧ್ಯಾನದಲ್ಲಿ ಮಗ್ನರಾಗಲಿದ್ದಾರೆ.
ಸ್ವಾಮಿ ವಿವೇಕಾನಂದರು ಧ್ಯಾನಸ್ಥರಾಗಿದ್ದ ಸ್ಥಳದಲ್ಲಿಯೇ ಹಗಲು ರಾತ್ರಿ ಎನ್ನದೇ ಸುಮಾರು 45 ಗಂಟೆಗಳ ಕಾಲ ಧ್ಯಾನ ಮಾಡಲಿದ್ದಾರೆ. ಧ್ಯಾನದ ಅವಧಿಯಲ್ಲಿ ಮೋದಿ ಅವರು ದ್ರವರೂಪದ ಆಹಾರ ಮಾತ್ರ ಸೇವನೆ ಮಾಡಲಿದ್ದಾರೆ. ಮೋದಿ ಅವರ ಈ ಧ್ಯಾನವನ್ನು ಕರ್ನಾಟಕ ಬಿಜೆಪಿಯು ನವ ಭಾರತದ ನವೋದಯ ಎಂದು ಬಣ್ಣಿಸಿದೆ.