ಹಸಿರು ಕುಡ್ಲ-ಸ್ವಚ್ಛ ಕುಡ್ಲಕ್ಕೆ ಶ್ರಮಿಸಿ: ಕ್ಯಾ.ಬ್ರಿಜೇಶ್‌ ಚೌಟ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ಪರಿಸರ ದಿನದ ಅಂಗವಾಗಿ ದೇಶದಾದ್ಯಂತ ʻತಾಯಿಯ ಹೆಸರಿನಲ್ಲಿ ಒಂದು ಸಸಿ ಎಂಬ ಅಭಿಯಾನ ನಡೆಸಲು ಕರೆ ನೀಡಿದ್ದು, ದಕ್ಷಿಣ ಕನ್ನಡದ ನೂತನ ಸಂಸದ ಕ್ಯಾ.ಬ್ರಿಜೇಶ್‌ ಚೌಟ ಅವರು ಡಾ.ಗಿರಿಧರ್‌ ರಾವ್ ಸಂಜೀವಿ ಭಾಯಿ ವೃದ್ದಾಶ್ರಮದ ಆವರಣದಲ್ಲಿ ಹಣ್ಣಿನ ಗಿಡ ನೆಡುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿದರು.

ತಾಯಂದಿರ ಹೆಸರಿನಲ್ಲಿ ಗಿಡನೆಡುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ನಗರವನ್ನು ‘ಹಸಿರು ಕುಡ್ಲ-ಸ್ವಚ್ಛ ಕುಡ್ಲ’ವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಕ್ಯಾ.ಚೌಟ ಮನವಿ ಮಾಡಿದರು. ಈ ವೃದ್ದಾಶ್ರಮದಲ್ಲಿರುವ ತಾಯಂದಿರ ಹೆಸರಿನಲ್ಲಿ ಗಿಡ ನೆಟ್ಟ ಗಳಿಗೆ ಅವಿಸ್ಮರಣೀಯ ಎಂದರು. ಪ್ರಧಾನಿ ಅಪಾರವಾಗಿ ಗೌರವಿಸುವ ನಾರೀಶಕ್ತಿ ನನ್ನ ಚುನಾವಣಾ ಸಮಯದಲ್ಲಿ ಮಹತ್ವದ ಪಾತ್ರವಹಿಸಿದೆ. ಚುನಾವಣೆಯ ಠೇವಣಿಗಾಗಿ ತಾಯಂದಿರು ನೀಡಿದ ಹಣ ನನಗೆ ಅಮೂಲ್ಯವಾದದ್ದು ಎಂದು ಸ್ಮರಿಸಿದರು.

LEAVE A REPLY

Please enter your comment!
Please enter your name here