ಬೋವಿ ನಿಗಮದಲ್ಲಿ 100 ಕೋಟಿ ಅವ್ಯವಹಾರ – ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಆರೋಪ – ಆಡಿಯೋ ವೈರಲ್

ಮಂಗಳೂರು (ಬೆಂಗಳೂರು): ಬೋವಿ ನಿಗಮದಲ್ಲಿ 100 ಕೋಟಿ ಅವ್ಯವಹಾರ ಆಗಿದೆ ಎಂದು ಬೋವಿ ನಿಗಮದ ಮಾಜಿ ಅಧ್ಯಕ್ಷ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌, ನೂತನ ಸಂಸದ ಕೋಟ ಶ್ರೀನಿವಾಸ್‌ ಪೂಜಾರಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ವಾಯ್ಸ್ ಮೆಸೇಜ್‌ ಮೂಲಕ ಗೂಳಿಹಟ್ಟಿ ಶೇಖರ್‌, ಉಡುಪಿ-ಚಿಕ್ಕಮಗಳೂರು ನೂತನ ಸಂಸದ ಕೋಟ ಶ್ರೀನಿವಾಸ್‌ ಪೂಜಾರಿ, ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಸಚಿವರಾಗಿದ್ದಾಗ ಹಗರಣ ನಡೆದಿದೆ. ಬೋವಿ ನಿಗಮದ ಹಗರಣವನ್ನು ಸಿಐಡಿ ತನಿಖೆಗೆ ನೀಡಲಾಗಿದೆ. ಪ್ರಕರಣ ಸಂಬಂಧ ಇಬ್ಬರ ಕೊಲೆ ಆಗಿದೆ ಎಂದು ಆರೋಪ ಮಾಡಿದ್ದಾರೆ.

ಸಿಬಿಐ ತನಿಖೆ ಬೇಡ, ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿಸಿ. ಕೋಟ ಶ್ರೀನಿವಾಸ್‌ ಪೂಜಾರಿಯಂಥ ಪ್ರಾಮಾಣಿಕರು ದೇಶದಲ್ಲಿಲ್ಲ. ಈಗ 50-60 ಕೋಟಿ ಆಸ್ತಿ ಮಾಡಿದ್ದು ಎಲ್ಲಿಂದ ಬಂತು? ಎಸ್ಟಿ ನಿಗಮ, ಬೋವಿ ನಿಗಮ ಎಲ್ಲ ಹಗರಣಗಳ ಬಗ್ಗೆ ತನಿಖೆ ಮಾಡಿ. ಸಿದ್ದರಾಮಯ್ಯ ಸಿಎಂ ಆದ ಬಳಿಕ ತನಿಖೆ ಸ್ಥಗಿತ ಆಗಿದೆ. ಬಿಎಸ್‌ ಯಡಿಯೂರಪ್ಪ ಕೇಸ್‌ ತನಿಖೆ ಮಾಡದೆ ಯಾಕೆ ಮುಚ್ಚಿ ಹಾಕಿದ್ರಿ? ದೂರುದಾರ ಮಹಿಳೆ ಸಾವಿಗೀಡಾದ ಸುದ್ದಿ ಎಲ್ಲೆಡೆ ಬಂದಿದೆ ಎಂದು ಆಡಿಯೋ ಬಾಂಬ್ ಸಿಡಿಸಿದ್ದು, ವೈರಲ್ ಆಗಿದೆ. ಆಡಿಯೋದ  ಪೂರ್ಣ ವಿವರ ಇಲ್ಲಿದೆ.

LEAVE A REPLY

Please enter your comment!
Please enter your name here