ವಾಟ್ಸಪ್ ನಲ್ಲಿ ರಾಜೀನಾಮೆ ಕೇಳಿದರೆ ಕೊಡಲು ಆಗಲ್ಲ- ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್

ಮಂಗಳೂರು: ವಾಟ್ಸಪ್‌ ನಲ್ಲಿ ರಾಜೀನಾಮೆ ಕೇಳಿದರೆ ಕೊಡಲು ಆಗಲ್ಲ ಎಂದು ದ.ಕ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದ್ದಾರೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ವಾಟ್ಸಪ್ ಯೂನಿವರ್ಸಿಟಿಯ ಸ್ಟೂಡೆಂಟ್ ಅಲ್ಲ, ನಾನು ಕಾಂಗ್ರೆಸ್ ಯೂನಿವರ್ಸಿಟಿಯ ಸ್ಟೂಡೆಂಟ್. ನನ್ನನ್ನು ಜಿಲ್ಲಾಧ್ಯಕ್ಷ ಮಾಡಲು ಅಂದಿನ 7 ಶಾಸಕರು ಪತ್ರ ಕೊಟ್ಟಿದ್ದರು. ನಾನು ಕಾಂಗ್ರೆಸ್ ಕಾರ್ಯಕರ್ತ, ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ. 

ನನ್ನನ್ನು ಪಕ್ಷ ನೇಮಿಸಿದೆ, ಯಾವ ಸಂದರ್ಭದಲ್ಲಿ ಏನು ಮಾಡಬೇಕು ಎಂದು ಪಕ್ಷಕ್ಕೆ ಗೊತ್ತಿದೆ. ಜನಾರ್ದನ ಪೂಜಾರಿಯವರು 5 ಬಾರಿ, ವೀರಪ್ಪ ಮೊೖಲಿ ಎರಡು ಬಾರಿ ಸೋತಾಗ ಯಾರೂ ರಾಜೀನಾಮೆ ನೀಡರಲಿಲ್ಲ. ಯಾರೋ ರಾಜೀನಾಮೆ ಕೇಳಿದರೆಂದು ರಾಜೀನಾಮೆ ಕೊಡಲು ಆಗಲ್ಲ ಎಂದು ಹೇಳಿದ ಅವರು ಪಕ್ಷ ತೀರ್ಮಾನ ಮಾಡಿದರೆ ಮಾತ್ರ ರಾಜೀನಾಮೆ. ಜಿಲ್ಲೆಯ ಯಾವ ಕಾಂಗ್ರೆಸ್ ನಾಯಕರು ನನ್ನ ರಾಜೀನಾಮೆ ಕೇಳಿಲ್ಲ. ಪದ್ಮರಾಜ್ ಪೂಜಾರಿ, ರಮಾನಾಥ ರೈ ರಾಜೀನಾಮೆ ಕೇಳಿಲ್ಲ, ಯಾರೋ ವಾಟ್ಸಪ್‌ನಲ್ಲಿ ರಾಜೀನಾಮೆ ಕೇಳಿದರೆ ರಾಜೀನಾಮೆ ಕೊಡಲು ಆಗಲ್ಲ ಎಂದು ಹೇಳಿದ್ದಾರೆ. ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ನಾಯಕರಿಗೆ ಹಾಗೂ ನೂತನ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ಹರೀಶ್‌ ಕುಮಾರ್ ರಾಜಕೀಯ ಧ್ವೇಷಗಳನ್ನ ಬಿಟ್ಟು ಹೊಸ ಸರ್ಕಾರ ಕೆಲಸ ಮಾಡಲಿ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಮುಕ್ತ ಭಾರತ ಎಂದ ನರೇಂದ್ರ ಮೋದಿ 10 ವರ್ಷದ ಹಿಂದೆ ಹೇಳಿದ್ದರು. 400ಕ್ಕೂ ಹೆಚ್ಚು ಸ್ಧಾನಗಳನ್ನ ಗೆದ್ದು ಬರುತ್ತೆ ಎಂದವರು 240 ಸ್ಧಾನಕ್ಕೆ ಕುಸಿದಿದ್ದಾರೆ. ಇಡೀ ದೇಶದ ಪ್ರತಿ ಬೂತ್‌ನಲ್ಲು ಕಾರ್ಯಕರ್ತರಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ಯಾರಿಂದಲೂ ಸಾಧ್ಯವಿಲ್ಲ. ಮತ ಜಾಸ್ತಿ ಗಳಿಸಿದೆ. ಆದ್ರೆ ಪಕ್ಷ ಸೋತಿದೆ ಎಂದರು. ರಾಜೀನಾಮೆ ಯಾರು ಕಿಸೆಯಲ್ಲಿ ಇಟ್ಟುಕೊಂಡು ಓಡಾಡುವುದಿಲ್ಲ. ಮಾರ್ಕೆಟ್‌ನಲ್ಲೂ ಸಿಗೋದಿಲ್ಲ. ಪಕ್ಷ ಸೋತಿದೆ ಎಂದು ರಾಜೀನಾಮೆ ಕೊಟ್ಟು ಓಡಿ ಹೋಗೋದಿಕ್ಕೆ ಆಗೋದಿಲ್ಲ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here