ಎಚ್‌ ಎಸ್‌ ಆರ್‌ ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಇಂದು ಕೊನೆ ದಿನ – ನಾಳೆಯಿಂದ ದಂಡ ಫಿಕ್ಸ್

ಮಂಗಳೂರು (ಬೆಂಗಳೂರು): ಕರ್ನಾಟಕ ಸಾರಿಗೆ ಇಲಾಖೆಯು ರಾಜ್ಯದಲ್ಲಿ ಈಗಾಗಲೇ ಎಲ್ಲ ವಾಹನಗಳಿಗೂ ಎಚ್‌ ಎಸ್‌ ಆರ್‌ ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಆದೇಶ ಹೊರಡಿಸಿದ್ದು, ಹಲವು ಬಾರಿ ಅವಧಿ ವಿಸ್ತರಣೆ ಮಾಡಿ ಜೂನ್.‌12ಕ್ಕೆ ಗಡುವು ವಿಸ್ತರಿಸಿತ್ತು.

2019ರ ಏಪ್ರಿಲ್ 1ರ ಮೊದಲು ರಾಜ್ಯದಲ್ಲಿ ನೋಂದಣಿಯಾಗಿರುವ ಎಲ್ಲಾ ವಾಹನಗಳಿಗೆ ಎಚ್‌ಎಸ್‌ಆರ್ ಪಿ  ಅಳವಡಿಸುವುದನ್ನು ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ ಕಳೆದ ವರ್ಷ ಅಗಸ್ಟ್‌ ತಿಂಗಳಿನಲ್ಲಿ ಅಧಿಸೂಚನೆ ಹೊರಡಿಸಿತ್ತು. ರಾಜ್ಯ ಸಾರಿಗೆ ಇಲಾಖೆ ಜೂನ್‌ 12 ರವರೆಗೆ ಎಚ್ ಎಸ್ ಆರ್ ಪಿ ನಂಬರ್‌ ಪ್ಲೇಟ್ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಿತ್ತು.ಇಂದಿಗೆ ಈ ಅವಧಿ ಮುಕ್ತಾಯಗೊಳ್ಳಲಿದ್ದು, ನಾಳೆಯಿಂದ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ದಂಡ ವಿಧಿಸಲಾಗುವುದು. ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸದಿದ್ದರೆ 500 ರೂ.ನಿಂದ 1,000 ರೂ.ವರೆಗೆ ದಂಡ ವಿಧಿಸುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here