ಜು.22ರಿಂದ ಮಂಗಳೂರು – ಅಬುಧಾಬಿ ನಡುವೆ ಪ್ರತಿದಿನ ಏರ್ ಇಂಡಿಯಾ ವಿಮಾನ ಹಾರಾಟ

ಮಂಗಳೂರು: ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಬುಧಾಬಿಗೆ ವಾರಕ್ಕೆ 4 ದಿನಗಳ ಕಾಲ ಹಾರಾಟ ನಡೆಸುತ್ತಿದ್ದ ಏರ್ ಇಂಡಿಯಾ ಎಕ್ಸ್‌ ಪ್ರೆಸ್ ವಿಮಾನಗಳು ಜು.‌22ರಿಂದ ಪ್ರತಿದಿನ ಮಂಗಳೂರಿನಿಂದ ಅಬುಧಾಬಿಗೆ ಹಾರಾಟ ನಡೆಸಲಿದೆ.

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಬುಧಾಬಿಗೆ ಮಂಗಳವಾರ, ಗುರುವಾರ, ಶನಿವಾರ ಮತ್ತು ರವಿವಾರ ಏರ್ ಇಂಡಿಯಾ ಎಕ್ಸ್‌ ಪ್ರೆಸ್ ವಿಮಾನದ ಹಾರಾಟ ನಡೆಸುತ್ತಿತ್ತು. ಇದೀಗ ಮೂರು ವಿಮಾನಗಳು ಹೆಚ್ಚುವರಿ ಸೇರ್ಪಡೆಯೊಂದಿಗೆ ಪ್ರತಿ ದಿನ ಹಾರಾಟ ನಡೆಸಲಿದೆ ಎಂದು ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here