ಮಂಗಳೂರು/ಬೆಳ್ತಂಗಡಿ: ಚಾರ್ಮಾಡಿ ಘಾಟಿಯ 7 ಮತ್ತು 8ನೇ ತಿರುವಿನಲ್ಲಿ ಏಕಾಏಕಿ ಕಾಡಾನೆ ಬಸ್ಸಿಗೆ ಅಡ್ಡ ಬಂದು ನಿಂತ ಘಟನೆ ಬುಧವಾರ(ಜೂ.12) ತಡ ರಾತ್ರಿ ಸಂಭವಿಸಿದೆ. ಕಾಡಾನೆ ರಸ್ತೆಯಲ್ಲಿಯೇ ನಿಂತ ಕಾರಣ ಸುಮಾರು ಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಕಾಡಾನೆಯನ್ನು ನೋಡಿದ ಕೂಡಲೇ ಚಾಲಕ ಬಸ್ ನಿಲ್ಲಿಸಿದ್ದಾನೆ ಈ ವೇಳೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಬಸ್ಸಿನ ಎದುರು ನಿಂತಿದ್ದ ಆನೆಯನ್ನು ಕಂಡು ಗಾಬರಿಗೊಂಡಿದ್ದಾರೆ. ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆಯಲ್ಲೇ ನಿಂತ ಕಾಡಾನೆ ಬಳಿಕ ಅರಣ್ಯದ ಕಡೆ ಮುಖ ಮಾಡಿದೆ. ಕಾಡಾನೆಯಿಂದಾಗಿ ಚಾರ್ಮಾಡಿ ಘಾಟಿಯಲ್ಲಿ ಸುಮಾರು ಎರಡು ಕಿಲೋಮೀಟರ್ ದೂರದವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಆದಷ್ಟು ಬೇಗ ಕಾಡಾನೆಯನ್ನು ಸ್ಥಳಾಂತರಿಸುವಂತೆ ಇಲ್ಲಿನ ಸ್ಥಳೀಯರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.