ನೋ ಕಿಸ್‌, ನೋ ಹಗ್.. ಓನ್ಲಿ ನಮಸ್ತೆ – ಭಾರತೀಯ ಸಂಸ್ಕೃತಿಯಂತೆ ಪ್ರಧಾನಿ ಮೋದಿಗೆ  ನಮಸ್ಕಾರ ಮಾಡಿದ ಇಟಲಿ ಪಿ.ಎಂ 

ಮಂಗಳೂರು(ಇಟಲಿ): ಇಟಲಿಯಲ್ಲಿ ನಡೆಯುತ್ತಿರುವ 50ನೇ G7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಇಟಲಿಗೆ ತೆರಳಿದ್ದಾರೆ.  ಪ್ರಧಾನಿಯನ್ನು ಸ್ವಾಗತಿಸುವ ವೇಳೆ ಇಟಲಿಯ ಮಹಿಳಾ ಪ್ರಧಾನಿ ಜಾರ್ಜಿಯಾ ಮೆಲೋನಿ ಕಿಸ್, ಹಗ್ ಮಾಡದೇ ಕೇವಲ ಬಾರತೀಯ ಸಂಸ್ಕೃತಿಯಂತೆ ನಮಸ್ಕಾರ ಎಂದು ಕೈ ಮುಗಿದಿದ್ದಾರೆ.

G7 ಶೃಂಗಸಭೆಗೆ ಆಗಮಿಸಿದ ಇಂಗ್ಲೆಂಡ್​ನ ಪ್ರಧಾನಿ ರಿಷಿ ಸುನಕ್ ಅವರನ್ನು ಇಟಲಿಯ ಪ್ರಧಾನಿ ಮೆಲೋನಿಯವರು ಕಿಸ್ ಮಾಡಿ, ಹಗ್ ಮಾಡಿ ಹೃದಯ ತುಂಬಿ ಸ್ವಾಗತ ಕೋರಿದರು. ಅದರಂತೆ G7 ಶೃಂಗಸಭೆಯಲ್ಲಿ ಭಾರತದ ಪರವಾಗಿ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಂಡಿದ್ದರು. ಈ ವೇಳೆ ಮೋದಿಯವರನ್ನು ಸ್ವಾಗತ ಮಾಡಿದ ಇಟಲಿ ಪ್ರಧಾನಿ ಮೆಲೋನಿಯವರು ಕಿಸ್, ಹಗ್ ಯಾವುದನ್ನು ಮಾಡದೇ ಕೇವಲ ನಮಸ್ಕಾರ ಮಾಡಿ ಬರಮಾಡಿಕೊಂಡರು. ಇಟಲಿ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್​ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಪ್ರಧಾನಿ ಇಟಲಿಯ ಭೇಟಿಯ ಭಾಗವಾಗಿ ಜಿ7 ಔಟ್ರೀಚ್ ಸೆಷನ್​ನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಎನರ್ಜಿ, ಆಫ್ರಿಕಾ-ಮೆಡಿಟರೇನಿಯನ್​ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಪ್ರಧಾನಿ ಮೆಲೋನಿ ಆಯೋಜಿಸಿದ್ದು, ವ್ಯಾಟಿಕನ್ ಸಿಟಿಯ ಪೋಪ್ ಫ್ರಾನ್ಸಿಸ್ ಸೇರಿ ಇತರ ಗಣ್ಯರು ಭಾಗವಹಿಸಲಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here