ತೈಲ ಬೆಲೆ ಹಾಗೂ ದಿನ ನಿತ್ಯದ ಬಳಕೆ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ಪತ್ರಿಭಟನೆ

ಮಂಗಳೂರು: ತೈಲ ಬೆಲೆ ಹಾಗೂ ದಿನ ನಿತ್ಯದ ಬಳಕೆ ವಸ್ತುಗಳ ಬೆಲೆ ಏರಿಕೆ ಖಂಡಿಸಿ ರಾಜ್ಯ ಸರಕಾರದ ವಿರುದ್ದ  ಇಂದು ಬಿ.ಜೆ.ಪಿ ರಾಜ್ಯಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯಾಧ್ಯಂತ ಪತ್ರಿಭಟನೆ ನಡೆಯಿತು.

ಅದರಂತೆ ಮಂಗಳೂರಿ‌ನ ಪಿ.ವಿ.ಎಸ್ ವೃತ್ತದ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಯಿತು. ಕೆಲಕಾಲ ವಾಹನ ಸಂಚಾರ ಸ್ಥಗಿತ ಗೊಳಿಸಿ ಪ್ರತಿಭಟನೆ ‌ನಡೆಸಿದರಿಂದ  ವಾಹನ ಸವಾರರಿಗೆ ತೊಂದರೆ ಆದ ಹಿನ್ನೆಲೆಯಲ್ಲಿ ಪೋಲಿಸ್ ಇಲಾಖೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡರು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್ , ಮ.ನಾ.ಪ. ಮೇಯರ್ ಸುಧಿರ್ ಶೆಟ್ಟಿ ಹಾಗೂ ಮುಖಂಡರುಗಳಾದ ರವಿಶಂಕರ್ ಮಿಜಾರ ಹಾಗು ಪಕ್ಷದ ಮುಖಂಡರು‌, ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here