ಪಶ್ಚಿಮ ಕರಾವಳಿಯಲ್ಲಿ ಮೀನುಗಾರಿಕೆಗೆ ತಾತ್ಕಾಲಿಕ ನಿಷೇಧ – ಗಗನಕ್ಕೇರಿದ ಆಮದು ಮೀನಿನ ಬೆಲೆ

ಮಂಗಳೂರು: ರಾಜ್ಯದಲ್ಲಿ ಮೀನಿನ ಬೆಲೆ ಗಗನಕ್ಕೇರುತ್ತಿದೆ. ಮುಂಗಾರು ಮಳೆಯ ಹಿನ್ನೆಲೆಯಲ್ಲಿ ಯಂತ್ರ ಚಾಲಿತ ಬೊಟ್ ಮೂಲಕ ಮೀನುಗಾರಿಕೆಗೆ ರಾಜ್ಯದಲ್ಲಿ ನಿಷೇಧ ಹೇರಲಾಗಿದೆ. ಸಾಂಪ್ರದಾಯಿಕ ಮೀನುಗಾರಿಕೆಗೆ ಮಾತ್ರ ಅವಕಾಶ ಇದ್ದು, ರಾಜ್ಯದ ಜನರ ಬೇಡಿಕೆಗೆ ತಕ್ಕಂತೆ ಮೀನನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಒಡಿಶಾ ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಿಂದ ರಾಜ್ಯಕ್ಕೆ ಮೀನು ಆಮದು ಮಾಡಲಾಗುತ್ತಿದ್ದು ಸಹಜವಾಗಿಯೇ ಮೀನಿನ ಬೆಲೆ ಗಗನಕ್ಕೇರುತ್ತಿದೆ.

ಪ್ರತಿದಿನ ಉಡುಪಿಯ ಮಲ್ಪೆ ಬಂದರಿಗೆ ಟನ್ ಗಟ್ಟಲೆ ಮೀನುಗಳು ಬರುತ್ತಿವೆ. ಸದ್ಯ ಪಶ್ಚಿಮ ಕರಾವಳಿಯಲ್ಲಿ ಮೀನುಗಾರಿಕೆಗೆ ನಿಷೇಧ ಇದ್ದು  ಪೂರ್ವ ಕರಾವಳಿಯಲ್ಲಿ ನಿಷೇಧ ಇರುವುದಿಲ್ಲ. ಪಶ್ಚಿಮ ಕರಾವಳಿಯಲ್ಲಿ ಮೀನುಗಾರಿಕೆ ಆರಂಭವಾಗುತ್ತಿದ್ದಂತೆ ಪೂರ್ವ ಕರಾವಳಿಯಲ್ಲಿ ಮೀನುಗಾರಿಕೆಗೆ ನಿಷೇಧ ಹೇರಲಾಗುತ್ತದೆ. ಈ ಸಮಯದಲ್ಲಿ ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ಇದ್ದರೂ ಭಾರಿ ಗಾಳಿ, ಮಳೆಯಿಂದಾಗಿ ಮೀನುಗಾರಿಕೆ ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಮೀನಿಗೆ ತಾತ್ಕಾಲಿಕ ಬರ ಎದುರಾಗಿದ್ದು, ಬೆಲೆ ಗಗನಕ್ಕೇರಿದೆ.

LEAVE A REPLY

Please enter your comment!
Please enter your name here