ಮಂಗಳೂರು/ದೆಹಲಿ: ದೆಹಲಿ-ಎನ್ಸಿಆರ್ ನಲ್ಲಿ ಶುಕ್ರವಾರ ಭಾರಿ ಮಳೆ ಸುರಿದಿದ್ದು, ಅನೇಕ ಪ್ರದೇಶಗಳು ತೀವ್ರ ಜಲಾವೃತಗೊಂಡಿದೆ. ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ -1 ರ ಮೇಲ್ಛಾವಣಿ ಕುಸಿದಿದ್ದರಿಂದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇತರ 6 ಜನರು ಗಾಯಗೊಂಡಿದ್ದಾರೆ.
ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ -1 ರ ಮೇಲ್ಛಾವಣಿ ಕುಸಿದು ಹಲವಾರು ಕಾರುಗಳು ಜಖಂಗೊಂಡಿದೆ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾಹಿತಿ ಪಡೆದ ನಂತರ, ಸರಿಸುಮಾರು ಮೂರು ಅಗ್ನಿಶಾಮಕ ದಳಗಳನ್ನು ಘಟನಾ ಸ್ಥಳಕ್ಕೆ ತೆರಲಿದೆ. ಹಾನಿಗೊಳಗಾದ ವಾಹನಗಳಲ್ಲಿ ಯಾವುದೇ ವ್ಯಕ್ತಿಗಳು ಸಿಲುಕಿಲ್ಲ ಎಂದು ಖಚಿತಪಡಿಸಿಕೊಳ್ಳಲು ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಘಟನೆಯ ನಂತರ, ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಡಿಐಎಎಲ್) ಟರ್ಮಿನಲ್ 1 ರಿಂದ ಎಲ್ಲಾ ನಿರ್ಗಮನಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಚೆಕ್-ಇನ್ ಕೌಂಟರ್ ಗಳನ್ನು ಮುಚ್ಚಲಾಗಿದೆ.