ತುಳು ಭಾಷಿಕರಿಗೆ ಮತ್ತು ಆಸಕ್ತರಿಗೆ ಸಿಹಿ ಸುದ್ದಿ – ಗೂಗಲ್‌ ಟ್ರಾನ್ಸ್‌ಲೇಟ್‌ಗೆ ತುಳು ಸೇರ್ಪಡೆ

ಮಂಗಳೂರು/ಬೆಂಗಳೂರು: ಗೂಗಲ್‌ ಟ್ರಾನ್ಸ್‌ಲೇಟ್‌ನಲ್ಲಿ ಹೊಸದಾಗಿ ತುಳು ಸೇರಿದಂತೆ 110 ಭಾಷೆಗಳನ್ನು ಸೇರಿಸಲಾಗಿದೆ. ಭಾರತದ  ಅವಧಿ, ಬೋಡೋ, ಖಾಸಿ, ಕೊಕ್ಬೊರೊಕ್, ಮಾರ್ವಾಡಿ, ಸಂತಾಲಿಯನ್ನು ಇದರಲ್ಲಿ ಸೇರಿದೆ.

ಗೂಗಲ್ ಅನುವಾದವನ್ನು 2006 ರಲ್ಲಿ ಪರಿಚಯಿಸಲಾಗಿದ್ದು ಇಲ್ಲಿಯವರೆಗೆ 133 ಭಾಷೆಗಳನ್ನು ಬೆಂಬಲಿಸುತಿತ್ತು. ಆದರೆ ಈಗ ಒಂದೇ ಬಾರಿಗೆ 110 ಭಾಷೆಗಳನ್ನು ಸೇರಿಸಿದ್ದು ಒಟ್ಟು ಈಗ 243 ಭಾಷೆಗಳನ್ನು ಒಳಗೊಂಡಿದೆ. ಈಗ ಗೂಗಲ್‌ ಟ್ರಾನ್ಸ್‌ಲೇಟ್‌ನಲ್ಲಿ ತುಳು ಭಾಷೆ ಸೇರ್ಪಡೆಯಾಗಿದೆ.ಇಂಗ್ಲಿಷ್ ಅಥವಾ ಯಾವುದೇ ಭಾಷೆಯ ಪದಗಳನ್ನು ಉಲ್ಲೇಖಿಸಿ ತುಳುವಿನಲ್ಲಿ ಅರ್ಥ ಕೇಳಿದರೆ ಅದಕ್ಕೀಗ ಸಂವಾದಿ ಅರ್ಥ ಕೊಡಬಲ್ಲದು.  

ಇದಕ್ಕೆ ಪ್ರತಿಕ್ರಿಯಿಸಿರುವ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್, ಗೂಗಲ್ ಟ್ರಾನ್ಸೇಲಟರ್ ನಲ್ಲಿ ತುಳು ಭಾಷೆ ಸೇರ್ಪಡೆಗೊಂಡಿರುವುದು ತುಳು ಭಾಷೆಗೆ ಜಾಗತಿಕವಾಗಿ ಸಂದ ಗೌರವವಾಗಿದೆ, ತುಳುವರು ಸಂಭ್ರಮಪಡುವಂತಹ ವಿಚಾರವಾಗಿದೆ. ಗೂಗಲ್ ಟ್ರಾನ್ಸೇಲಟರ್ ನಲ್ಲಿ ಕೆಲವು ಸಂದರ್ಭದಲ್ಲಿ ಶಬ್ದಗಳು ತಪ್ಪಾಗಿ ಉಲ್ಲೇಖವಾಗುವುದು ಸಾಮಾನ್ಯ ವಿಚಾರ. ಇಂತಹ ಸಂದರ್ಭಗಳಲ್ಲಿ ಅಲ್ಲೇ ಇರುವ ಫೀಡ್ ಬ್ಯಾಕ್ ಕಾಲಮ್ ನಲ್ಲಿ ಸರಿಯಾದ ಶಬ್ದವನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದರೆ ಗೂಗಲ್ ಅದನ್ನು ಮುಂದಕ್ಕೆ ಸರಿ ಮಾಡಿಕೊಳ್ಳುವುದು. ಈ ಅಂಶವನ್ನು ತುಳುವರು ಸಮರ್ಪಕವಾಗಿ ಬಳಸಿಕೊಂಡರೆ ತುಳುವರಿಗೆ ಹಾಗೂ ತುಳುವೇತರರಿಗೂ ಪ್ರಯೋಜನವಾಗಲಿದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here