ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ – ಬಿಹಾರದಲ್ಲಿ 9 ದಿನಗಳಲ್ಲಿ ಕುಸಿದ ಐದನೇ ಸೇತುವೆ

ಮಂಗಳೂರು/ಬಿಹಾರ: ಬಿಹಾರದ ಮಧುಬನಿ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯೊಂದು ಶುಕ್ರವಾರ(ಜೂ.28) ಕುಸಿದು ಬಿದ್ದಿದ್ದು ಕಳೆದ ಒಂಬತ್ತು ದಿನಗಳಲ್ಲಿ ಬಿಹಾರದಲ್ಲಿ ಸೇತುವೆ ಕುಸಿತದ ಐದನೇ ಘಟನೆ ಇದಾಗಿದೆ.

ಮಧುಬನಿ ಜಿಲ್ಲೆಯ ಭೇಜಾ ಪೊಲೀಸ್ ಠಾಣೆಯ ಮಾದೇಪುರ್ ಬ್ಲಾಕ್‌ನಲ್ಲಿ ಈ ಘಟನೆ ನಡೆದಿದೆ. 75 ಮೀಟರ್ ಉದ್ದದ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದು ಬಿದ್ದಿದೆ. ಇದು ಸುಮಾರು ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸೇತುವೆಯಾಗಿದ್ದು 2021ರಿಂದಲೇ ಸೇತುವೆ ನಿರ್ಮಾಣ ಕಾರ್ಯ ಆರಂಭವಾಗಿದೆ. ಇದನ್ನು ಬಿಹಾರ ಸರ್ಕಾರದ ಗ್ರಾಮೀಣ ಕಾಮಗಾರಿ ಇಲಾಖೆಯಡಿಯಲ್ಲಿ ನಿರ್ಮಿಸಲಾಗುತ್ತಿದೆ.

ನೀರಿನ ಮಟ್ಟ ಹೆಚ್ಚಾಗುತ್ತಿದ್ದಂತೆ, 25 ಮೀಟರ್ ಉದ್ದದ ಆಧಾರ ಸ್ತಂಭವು ಕೆಳಗಿನ ನದಿಗೆ ಕುಸಿದು ಬಿದ್ದಿದೆ. ಸೇತುವೆ ಕುಸಿದ ಘಟನೆ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಈ ಬಗ್ಗೆ ಎಕ್ಸ್‌ ಪೋಸ್ಟ್ ನಲ್ಲಿ ಕಳೆದ ಒಂಬತ್ತು ದಿನದಲ್ಲಿ ಬಿಹಾರದಲ್ಲಿ ಈ ರೀತಿಯ ಐದನೇ ಘಟನೆ ಇದಾಗಿದೆ ಎಂದು ಹೇಳಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here