ಮಂಗಳೂರು/ಮುಂಬೈ: ಮಹಾರಾಷ್ಟ್ರದ ಲೋನಾವಾಲಾದ ಭೂಶಿ ಅಣೆಕಟ್ಟಿನಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಜಲಪಾತಕ್ಕೆ ಜಾರಿ ಜಲಾಶಯದ ಕೆಳಭಾಗದಲ್ಲಿ ಮುಳುಗಿ ಕನಿಷ್ಠ ಐವರು ಮಕ್ಕಳು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಭಾನುವಾರ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಅಣೆಕಟ್ಟು ತುಂಬಿ ಹರಿದಿದೆ. ಮಧ್ಯಾಹ್ನ ಪುಣೆ ಸಯ್ಯದ್ ನಗರದಿಂದ ಪ್ರವಾಸಕ್ಕೆ ಬಂದಿದ್ದ ಒಂದೇ ಕುಟುಂಬದ ಐವರು ಅಣೆಕಟ್ಟಿನಿಂದ ಹರಿದು ಬಂದ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. 36 ವರ್ಷದ ಮಹಿಳೆ, 13 ಮತ್ತು 8 ವರ್ಷದ ಬಾಲಕಿಯ ಶವಗಳನ್ನು ಜಲಪಾತದಿಂದ ಹೊರ ತೆಗೆಯಲಾಗಿದೆ. ರಕ್ಷಣಾ ತಂಡಗಳು ಉಳಿದವರ ಶವಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದೆ. 4 ವರ್ಷದ ಬಾಲಕ ಮತ್ತು 9 ವರ್ಷದ ಬಾಲಕಿ ನೀರಿನಲ್ಲಿ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಉಳಿದಂತೆ ಇಬ್ಬರು ಈಜಿ ದಡ ಸೇರಿದ್ದಾರೆ. ಘಟನಾ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರಿದ್ದರೂ ಪ್ರವಾಹದಲ್ಲಿ ಸಿಲುಕಿದ್ದವರನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಮೃತರನ್ನು ಪುಣೆ ಮೂಲದ ಶಾಹಿಸ್ತಾ ಅನ್ಸಾರಿ(36), ಅಮಿಮಾ ಅನ್ಸಾರಿ(13), ಉಮೇರಾ ಅನ್ಸಾರಿ(8) ಎನ್ನಲಾಗಿದ್ದು ಅದ್ನಾನ್ ಅನ್ಸಾರಿ(4) ಮತ್ತು ಮರಿಯಾ ಸಯ್ಯದ್(9) ಅವರ ಮೃತ ದೇಹಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ